ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಎ.೩೦ ರಂದು ೧೬ ಮತ್ತು ೧೯ ವರ್ಷದೊಳಗಿನ ವಯೋಮಾನದ ಕ್ರಿಕೇಟ್ ಆಟಗಾರರ ಆಯ್ಕೆ

ಭಟ್ಕಳ: ಎ.೩೦ ರಂದು ೧೬ ಮತ್ತು ೧೯ ವರ್ಷದೊಳಗಿನ ವಯೋಮಾನದ ಕ್ರಿಕೇಟ್ ಆಟಗಾರರ ಆಯ್ಕೆ

Thu, 27 Apr 2023 21:24:43  Office Staff   SOnews

ಭಟ್ಕಳ: ಭಟ್ಕಳ ಸ್ಪೋರ್ಟ್ಸ್ ಕ್ಲಬ್ ವತಿಯಿಂದ  ಉತ್ತರ ಕನ್ನಡ ಜಿಲ್ಲೆಯ  16 ಮತ್ತು 19 ವರ್ಷದೊಳಗಿನ ಕ್ರಿಕೇಟ್ ಕ್ರೀಡಾಪಟುಗಳ ಆಯ್ಕೆ ನಡೆಯಲಿದೆ ಎಂದು ಭಟ್ಕಳ ಸ್ಪೋರ್ಟ್ಸ್ ಕ್ಲಬ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಆಯ್ಕೆಯಾದ ಆಟಗಾರರಿಗೆ ಹುಬ್ಬಳ್ಳಿಯಲ್ಲಿ KSCA ಸಂಯೋಜಿತ ಇಂಟರ್-ಕ್ಲಬ್ ಪಂದ್ಯಾವಳಿಯಲ್ಲಿ ಆಡಲು ಅವಕಾಶವನ್ನು ನೀಡಲಾಗುವುದು. ಆಯ್ಕೆಯು ಭಟ್ಕಳದ ತಾಲೂಕು ಕ್ರೀಡಾಂಗದಲ್ಲಿ ಬೆಳಿಗ್ಗೆ ೮.೩೦ಗಂಟೆಯಿಂದ ನಡೆಲಾಗುವುದು. ಆಸಕ್ತ ಕ್ರಿಡಾಪಟುಗಳು ತಮ್ಮ ಆಧಾರ್ ಕಾರ್ಡ್ ಮತ್ತು ಜನನ ಪ್ರಮಾಣಪತ್ರವನ್ನು ತಪ್ಪದೆ ತರುವಂತೆ ಸಂಘಕಟರು ತಿಳಿಸಿದ್ದಾರೆ.

ವಯಸ್ಸಿನ ಮಾನದಂಡ: 16 ವರ್ಷದೊಳಗಿನವರು - 1 ಸೆಪ್ಟೆಂಬರ್ 2007 ರಂದು ಅಥವಾ ನಂತರ ಜನಿಸಿದ ಬಾಲಕರು, 19 ವರ್ಷದೊಳಗಿನವರು - 1 ಸೆಪ್ಟೆಂಬರ್ 2004 ರಂದು ಅಥವಾ ನಂತರ ಜನಿಸಿರಬೇಕು. ಆಸಕ್ತರು 8904600600 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಲಾಗಿದೆ.

ಬೇಸಿಗೆಯ ಅಂತರ್-ಅಕಾಡೆಮಿ ಪಂದ್ಯಗಳು ಮೇ ತಿಂಗಳಿನಿಂದ ನಡೆಯಲಿದ್ದು, ತರಬೇತಿ ಪೂರ್ಣಗೊಳಿಸಿದವರು ಭೇಟಿ ನೀಡುವ ತಂಡದ ವಿರುದ್ಧ ಪಂದ್ಯಗಳನ್ನು ಆಡಲು ಅವಕಾಶವನ್ನು ಪಡೆಯುತ್ತಾರೆ.

 

 


Share: