ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಆರ್ ಎನ್ ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೋಮಾ ಮೆಕಾನಿಕಲ್ ಅಭ್ಯರ್ಥಿಗಳಿಗೆ ಸಂದರ್ಶನ

ಭಟ್ಕಳ: ಆರ್ ಎನ್ ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ನಲ್ಲಿ ಡಿಪ್ಲೋಮಾ ಮೆಕಾನಿಕಲ್ ಅಭ್ಯರ್ಥಿಗಳಿಗೆ ಸಂದರ್ಶನ

Sun, 14 Aug 2022 01:42:35  Office Staff   S O News

ಭಟ್ಕಳ: ಮುರುಡೇಶ್ವರ ಆರ್ ಎನ್ ಶೆಟ್ಟಿ ರೂರಲ್ ಪಾಲಿಟೆಕ್ನಿಕ್ ನಲ್ಲಿ ಟೊಯೋಟೊ ಇಂಡಸ್ಟ್ರೀಸ್ ಇಂಜಿನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬೆಂಗಳೂರು ಇವರಿಂದ ದಿನಾಂಕ 16. 8. 20 22 ರಂದು ಬೆಳಿಗ್ಗೆ 10 ಗಂಟೆಯಿಂದ ಡಿಪ್ಲೋಮಾ ಮೆಕಾನಿಕಲ್ , ಆಟೋಮೊಬೈಲ್ ನಲ್ಲಿ 2020, 2021 ರಲ್ಲಿ ಪಾಸಾದ ಹಾಗೂ 2022ರಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ ಅಭ್ಯರ್ಥಿಗಳಿಗೆ ಅಪರಿಂಟಿಸ್ ಟ್ರೇನಿ ಆಗಿ ಆಯ್ಕೆ ಮಾಡಿಕೊಳ್ಳಲಾಗುವುದು.

ಐಟಿಐ ನಲ್ಲಿ ಪಿಟ್ಟರ್ ,ಟರ್ನರ್, ಮಸಿನಿಸ್ಟ್, ಮೋಟಾರ್ ಮೆಕಾನಿಕ್ ನಲ್ಲಿ 2020 ,20 21 ಮತ್ತು 2022 ರಲ್ಲಿ ಅಂತಿಮ ವರ್ಷದಲ್ಲಿ ಓದುತ್ತಿರುವ 18ರಿಂದ 23 ವರ್ಷ ಒಳಗಿನ ಅಭ್ಯರ್ಥಿಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು. ರಿಟರ್ನ್ ಟೆಸ್ಟ್ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು ಸಂದರ್ಶನಕ್ಕೆ ಬರುವವರು ತಮ್ಮ ಇತ್ತೀಚಿನ ರೆಸುಮ್ ಒಂದು ಪಾಸ್ಪೋರ್ಟ್ ಅಳತೆಯ ಫೋಟೋ , 10ನೇ ತರಗತಿ ಹಾಗೂ ಇತರ ನಿಮ್ಮ ಅಂಕಪಟ್ಟಿಗಳ ಪ್ರತಿಗಳನ್ನು ತರುವುದು. ಆಯ್ಕೆಯಾಗುವ ಡಿಪ್ಲೋಮಾ ಅಭ್ಯರ್ಥಿಗಳಿಗೆ ತಿಂಗಳಿಗೆ 20,104 /-ರೂಗಳು ಹಾಗೂ ಆಯ್ಕೆಯಾದ ಐಟಿಐ ಅಭ್ಯರ್ಥಿಗಳಿಗೆ ತಿಂಗಳಿಗೆ 16, 728 /.. ರೂಗಳನ್ನು ಸಂಬಳವನ್ನು ಪಡೆಯುವರು ಇದರ ಜೊತೆಗೆ ಇತರ ಸೌಲಭ್ಯಗಳು ಸಿಗುತ್ತವೆ. ಹೆಚ್ಚಿನ ಮಾಹಿತಿಗಾಗಿ ಉಪಪ್ರಾಚಾರ್ಯರು ಹಾಗೂ ಪ್ಲೇಸ್ಮೆಂಟ್ ಅಧಿಕಾರಿಗಳು ಆದ ಕೆ ಮರಿಸ್ವಾಮಿ ( 9448235284,) ಇವರನ್ನ ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Share: