ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಅತ್ಯಾಚಾರ ಆರೋಪಿ ಆತ್ಮಹತ್ಯೆ

ಭಟ್ಕಳ: ಅತ್ಯಾಚಾರ ಆರೋಪಿ ಆತ್ಮಹತ್ಯೆ

Fri, 14 Oct 2022 06:09:46  Office Staff   so news

ಭಟ್ಕಳ : ಅತ್ಯಾಚಾರ ಆರೋಪಿಯೋರ್ವ ಮನೆಯ ಹಿಂಬದಿಯ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭಟ್ಕಳ ತಾಲ್ಲೂಕಿನ ಹಡೀನ್ ಸಬ್ಬತ್ತಿಯಲ್ಲಿ ನಡೆದಿದೆ.

ನಾರಾಯಣ ನಾಯ್ಕ (64) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತನ ಮೇಲೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ  ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಕಾರವಾರದ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಿವಾಕರ ನಾರಾಯಣ ನಾಯ್ಕ ದೂರು ನೀಡಿದ್ದು ಪ್ರಕರಣ ದಾಖಲಿಸಿ ಕೊಂಡ ಎ.ಎಸ್.ಐ ಕೃಷ್ಣಾನಂದ ನಾಯ್ಕ ತನಿಖೆ ಕೈಗೊಂಡಿದ್ದಾರೆ.


Share: