ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ: ಅಕ್ರಮ ಜಾನುವಾರು ಸಾಗಾಟದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಳಿ – ಇಬ್ಬರು ಬಂಧನ

ಭಟ್ಕಳ: ಅಕ್ರಮ ಜಾನುವಾರು ಸಾಗಾಟದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ದಾಳಿ – ಇಬ್ಬರು ಬಂಧನ

Tue, 12 Nov 2024 07:01:08  Office Staff   SoNews

ಭಟ್ಕಳ: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ಭಟ್ಕಳ ನಗರ ಠಾಣೆ ಪೊಲೀಸರು ತಡೆದು, ವಾಹನ ಹಾಗೂ ಜಾನುವಾರುಗಳನ್ನು ವಶಪಡಿಸಿಕೊಂಡ ಘಟನೆ ಸೋಮವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ-66ರ ತೆಂಗಿನಗುಂಡಿ ಕ್ರಾಸ್ ಬಳಿ ನಡೆದಿದೆ.

ಬಂಧಿತ ಆರೋಪಿಗಳನ್ನು ಮೈಸೂರಿನ ಕೆ.ಆರ್. ನಗರ ಬಾಳೂರು ಹೊಸಕೊಪ್ಪಲು ಗಂಡನಹಳ್ಳಿಯ ರಾಘವೇಂದ್ರ ನಾಗೇಂದ್ರ (30) ಮತ್ತು ಪಿರಿಯಾಪಟ್ಟಣದ ಹಲಗನಹಳ್ಳಿಯ ಅಯೂಬ್ ಅಹ್ಮದ ರಶೀದ ಅಹ್ಮದ (40) ಎಂದು ಗುರುತಿಸಲಾಗಿದೆ. ಐತರೆ 5,50,000 ಮೌಲ್ಯದ 11 ಕೋಣಗಳು ಮತ್ತು 2,50,000 ಮೌಲ್ಯದ 5 ಎಮ್ಮೆಗಳನ್ನು ಯಾವುದೇ ಪರವಾನಿಗೆ ಇಲ್ಲದೇ ಅಶೋಕ ಲೇಲ್ಯಾಂಡ್ ವಾಹನದಲ್ಲಿ ಹಗ್ಗಗಳಿಂದ ಕಟ್ಟಿ ಸಾಗಾಟ ಮಾಡುತ್ತಿರುವಾಗ ಪೊಲೀಸರು ದಾಳಿ ನಡೆಸಿದ್ದಾರೆ.

ಈ ದಾಳಿಗೆ ಪಿ.ಐ ಗೋಪಿಕೃಷ್ಣ ಕೆ.ಆರ್ ನೇತೃತ್ವ ನೀಡಿದ್ದು, ಪಿ.ಎಸ್.ಐ ಸೋಮರಾಜ ರಾಠೋಡ ಮತ್ತು ಇತರ ಪೊಲೀಸ್ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

 

 


Share: