ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ಹುಯಿಲುಮಡಿ ಬೀಚ್‍ನಲ್ಲ ನಡೆದ ಫುಟ್‍ಬಾಲ್ ತರಬೇತಿ‌‌ ಶಿಬಿರ

ಭಟ್ಕಳ ಹುಯಿಲುಮಡಿ ಬೀಚ್‍ನಲ್ಲ ನಡೆದ ಫುಟ್‍ಬಾಲ್ ತರಬೇತಿ‌‌ ಶಿಬಿರ

Thu, 26 Jan 2023 07:23:51  Office Staff   so news

ಭಟ್ಕಳ: ಕರ್ನಾಟಕ ರಾಜ್ಯ ಫುಟ್‍ಬಾಲ್ ಅಸೋಶಿಯೇಶನ್ ಅಡಿಯಲ್ಲಿ ಭಟ್ಕಳದ ಹುಯಿಲುಮಡಿ ಬೀಚ್‍ನಲ್ಲ ನಡೆದ ತರಬೇತಿಯಲ್ಲಿ ರಾಜ್ಯದ ಅಟಗಾರರು ಭಾಗವಹಿಸಿದ್ದು ಅಂತಿಮವಾಗಿ ಗುಜರಾತ್‍ನ ಸೂರತ್‍ನಲ್ಲಿ ಜ.26ರಿಂದ ಫೆ.1ರ ತನಕ ನಡೆಯಲಿರುವ ಹೀರೋ ನ್ಯಾಶನಲ್ ಬೀಚ್ ಸೋಸರ್ ಚಾಂಪಿನ್‍ಶಿಪ್‍ನಲ್ಲಿ ಭಾಗವಹಿಸಲು 12 ಜನರ ತಂಡ ಹಾಗೂ ಇಬ್ಬರು ಅಧಿಕಾರಿಗಳನ್ನು ಆಯ್ಕೆ ಮಾಡಲಾಯಿತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 
ಆಯ್ಕೆಯಾದವರೆಂದರೆ ರಂಜೀತ್ ಕುಮಾರ್ ಆರ್., ಅಹಮ್ಮದ್ ರುಯೇಫಾ, ಸೈಯದ್ ಅಬ್ದುಲ್ ಸಮದ್, ಇಸ್ಮಾಯಿಲ್ ಮಹುಮದು ಜವ್ಪಾ, ಮೊಹಮ್ಮದ್ ಸುಫಿಯಾನ್, ಮೊಹಮ್ಮದ್ ಲುಕ್ಮಾನ್ ಶೇಖಜಿ, ಅಬ್ದುದ್ ದುಯ್ಯಾನ್, ಸುಶಾಂತ್ ಎಸ್. ನಾಯ್ಕ, ಮೊಹಮ್ಮದ್ ಸಲ್ಮಾನ್, ಜಾಸಿರ್ ಸೈಯದ್ ಖಾಜಿ, ಅಬ್ದುಸ್ ಸುಬಾನ್, ಅರೋನ್ ಡೋಮಿನಿಕ್ ಗುಡಿನೋ ಆಟಗಾರರಾಗಿ, ಮೆನೇಜರ್ ಆಗಿ  ಮಾವಿಯಾ ಮೋಹತೆಶಂ ಕೋಚ್ ಆಗಿ ಶಿವಾ ಗಜೇಂದ್ರನ್ ಆಯ್ಕೆಯಾಗಿದ್ದಾರೆ ಎಂದು ತಿಳಿಸಲಾಗಿದೆ. 

 


Share: