ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ:ವಿವಿಧೆಡೆ ತಂಬಾಕು ಹಾಗೂ ಗುಟ್ಕಾ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ

ಭಟ್ಕಳ:ವಿವಿಧೆಡೆ ತಂಬಾಕು ಹಾಗೂ ಗುಟ್ಕಾ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ

Thu, 25 May 2023 04:55:25  Office Staff   SO News

ಭಟ್ಕಳ:ತಾಲ್ಲೂಕಿನ ನಗರದ ಶಾಲಾ / ಕಾಲೇಜುಗಳು ಮತ್ತು ಮಾರುಕಟ್ಟೆ ಪ್ರದೇಶ ವ್ಯಾಪ್ತಿಯಲ್ಲಿ ಗುಟ್ಕಾ,ತಂಬಾಕು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ತಹಶೀಲ್ದಾರ್ ತಿಪ್ಪೇಸ್ವಾಮಿ ಮತ್ತು ವಿವಿಧ ಅಧಿಕಾರಿಗಳು,ಮತ್ತು ಪೊಲೀಸ್ ಸಿಬ್ಬಂದಿಗಳ ತಂಡ ದಾಳಿ ನಡೆಸಿದ್ದಾರೆ.
ಪಟ್ಟಣದ ಶಂಸುದ್ದೀನ್ ಸರ್ಕಲ್ ಇಂದ ಸೋಡಿಗದ್ದೆ ಕ್ರಾಸ್ ವರಿಗೆ ದಾಳಿಯ ನಡೆಸಿದ ಅಧಿಕಾರಿಗಳ ತಂಡ
12 ಅಂಗಡಿಗಳಲ್ಲಿ ಗುಟ್ಕಾ,ತಂಬಾಕು ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು,ಸ್ಥಳದಲ್ಲೇ 1900,ದಂಡ ವಿಧಿಸಿ,ಸೂಕ್ತ ಕ್ರಮವನ್ನು ಕೈಗೊಳ್ಳಲಾಗಿದೆ.
ಜನ ಸಾಮಾನ್ಯರಲ್ಲಿ ಅಧಿಕಾರಿಗಳು ಜಾಗ್ರತಿ ಮೂಡಿಸಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಕ ಪಾಂಡು ನಾಯ್ಕ್,ಕಂದಾಯ ನಿರೀಕ್ಷಕ ವಿಶ್ವನಾಥ್ ಗಾವ್ಕರ್ ಜಾಲಿ ಪಟ್ಟಣ ಪಂಚಾಯತ್ ಆರೋಗ್ಯ ನಿರೀಕ್ಷ ವಿನಾಯಕ್ ನಾಯ್ಕ,ತಾಲೂಕ ಆರೋಗ್ಯ ಅಧಿಕಾರಿ ಕಚೇರಿ ಸಿಬ್ಬಂದಿ ರಾಮಪ್ಪ,ತಹಶೀಲ್ದಾರ್ ಕಚೇರಿ ಸಿಬ್ಬಂದಿ ಉದಯ ತಳವಾರ್,ಎಎಸ್ಐ ರಾಜು ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.


Share: