ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ವಿಧಾನಸಭಾ ಚುನಾವಣೆಗೆ ತಯಾರಿ: ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾದ ಇನಾಯಿತುಲ್ಲಾ

ಭಟ್ಕಳ ವಿಧಾನಸಭಾ ಚುನಾವಣೆಗೆ ತಯಾರಿ: ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾದ ಇನಾಯಿತುಲ್ಲಾ

Mon, 17 Oct 2022 06:06:58  Office Staff   so news

ಭಟ್ಕಳ:ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಭಟ್ಕಳ ಹೊನ್ನಾವರ ಕದನ ಕಣ ದಿನಕ್ಕೊಂದು ಬಣ್ಣ ಪಡೆಯುತ್ತ ಸಾಗಿದೆ.ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಹಣಾಹಣಿಗೆ ಪಕ್ಷದ ವತಿಯಿಂದ ಸಿದ್ಧತೆ ನಡೆಯುತ್ತಿರುವಾಗಲೇ ಜೆಡಿಎಸ್ ಭಟ್ಕಳ ಘಟಕದ ಅಧ್ಯಕ್ಷ ಇನಾಯಿತುಲ್ಲಾ ಶಾಬಂದ್ರಿ ವರಿಷ್ಠ ದೇವೇಗೌಡರನ್ನು ಕರಿಗೆ  ಭೇಟಿಯಾಗಿದ್ದಾರೆ.
ಆರೋಗ್ಯ ವಿಚಾರಿಸುವ ನೆಪದಲ್ಲಿ ಗೌಡರನ್ನು ಭೇಟಿಯಾಗಿರುವ ಚುನಾವಣೆ ಸ್ಪರ್ಧೆ ಆಕಾಂಕ್ಷಿ ಶಾಬಂದ್ರಿಯವರ ಜೊತೆಗೆ ಗೌಡರು ಕೆಲ ಕಾಲ ರಾಜಕೀಯ ವಿಷಯಗಳನ್ನು ಚರ್ಚಿಸಿದ್ದಾರೆ.
ಚುನಾವಣೆಗೆ ಸಂಬಂಧಿಸಿದಂತೆ ಭಟ್ಕಳ ತಂಝೀಮ್‌ನ ನಿರ್ಣಯ ಎಣಿಕ ಏನು, ಭಟ್ಕಳದಲ್ಲಿ ರಾಜಕೀಯ ವಾತಾವರಣ ಹೇಗಿದೆ ಎಂದು ಗೌಡರು ವಿಚಾರಿಸಿದ್ದಾರೆ.
ಚುನಾವಣಾ ಸಿದ್ಧತೆಯ ಕಾರಣಕ್ಕಾಗಿ ಮಂಗಳೂರಿಗೆ ಬಂದಾಗ ಭಟ್ಕಳದ ಬಗ್ಗೆಯೂ ಗಮನ ಹರಿಸುವುದಾಗಿ ಗೌಡರು ತಿಳಿಸಿದ್ದಾರೆ.ಚುನಾವಣೆಗೆ ಸಿದ್ಧತೆ ಮಾಡಿಕೋ,ಚುನಾವಣೆಗೆ ಸ್ಪರ್ಧಿಸಿದರೆ ಪ್ರಚಾರಕ್ಕೆ ಬರುವುದಾಗಿಯೂ ಗೌಡರು ಭರವಸೆ ನೀಡಿರುವ ಬಗ್ಗೆ ಮೂಲಗಳು ತಿಳಿಸಿವೆ. 2013ರಲ್ಲಿ ಇನಾಯಿತುಲ್ಲಾ ಶಾಬಂದ್ರಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿ ಸೋತಿದ್ದರು.2018 ಚುನಾವಣೆಯಲ್ಲಿ ಅವರು ಸ್ಪರ್ಧಿಸಲು ಉತ್ಸಾಹ ತೋರಿದ್ದರಾದರೂ ತಂಜೀಮ್ ಬೆಂಬಲ ಸಿಕ್ಕಿರಲಿಲ್ಲ
ಆದರೆ 2023ರಲ್ಲಿ ಮತ್ತೆ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಉತ್ಸುಕರಾಗಿರುವ ಅವರು. ಕೆಲ ತಿಂಗಳ ಹಿಂದೆಯಷ್ಟೇ ವಿದೇಶದಲ್ಲಿ ನೆಲೆಸಿರುವ ಮುಸ್ಲಿಮ ಮುಖಂಡರನ್ನು ಭೇಟಿಯಾಗಿ ಮನದ ಇಂಗಿತ ಹೊರ ಹಾಕಿದ್ದರು. ಆದರೆ ಚುನಾವಣೆ ವಿಷಯದಲ್ಲಿ ಸದ್ಯ ತಂಜೀಮ್ ಮುಖಂಡರು ಮೌನವಾಗಿದ್ದು,ಶಾಬಂದ್ರಿಯವರ ಕಸರತ್ತು ಕುತೂಹಲ ಮೂಡಿಸಿದೆ.


Share: