ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ರೈಲು ನಿಲ್ದಾಣದ ಬಳಿ ಮೃತದೇಹ ಪತ್ತೆ

ಭಟ್ಕಳ ರೈಲು ನಿಲ್ದಾಣದ ಬಳಿ ಮೃತದೇಹ ಪತ್ತೆ

Fri, 13 Jan 2023 18:34:57  Office Staff   SOnews

ಭಟ್ಕಳ: ಭಟ್ಕಳ ರೈಲು ನಿಲ್ದಾಣದ ಬಳಿಯ ಚರಂಡಿಯ ದಡದಲ್ಲಿ ವ್ಯಕ್ತಿಯೊಬ್ಬರ  ಮೃತದೇಹ ಪತ್ತೆಯಾಗಿದ್ದು, ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಮೃತ ವ್ಯಕ್ತಿಯನ್ನು  ಹರಿಯಾಣ ಮೂಲದ ಬಾಲ ಚಂದ್ರಾನಂದ್ (58) ಎಂದು ಗುರುತಿಸಲಾಗಿದೆ. ವ್ಯಕ್ತಿ ರೈಲು ನಿಲ್ದಾಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಿಕ್ಷೆ ಬೇಡುತ್ತಿದ್ದ ಎಂದು ತಿಳಿದು ಬಂದಿದೆ.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.


Share: