ಭಟ್ಕಳ: ಭಟ್ಕಳ ರಂಜಾನ್ ಮಾರ್ಕೆಟ್ ನಲ್ಲಿ ಮಹಿಳೆಯನ್ನು ಮುಟ್ಟಿದ ವಿಚಾರಕ್ಕೆ ಗಲಾಟೆ ನಡೆದ ವೇಳೆ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ಕರೆದುಕೊಂಡು ಹೋಗುವ ವೇಳೆ ಪೊಲೀಸ್ ಜಿಪ್ ಅಡ್ಡಗಟ್ಟಿ ಕಲ್ಲಿನಿಂದ ಜಿಪ್ ಗ್ಲಾಸ್ ಒಡೆದಿರುವ ಘಟನೆ ತಡ ರಾತ್ರಿ ನಡೆದಿದೆ.
ಆರೋಪಿಗಳನ್ನು ಹದ್ಲೂರ್ ನಿವಾಸಿ ಚಂದ್ರು ಸೋಮಯ್ಯ ಗೊಂಡ, ಸುಲ್ತಾನ್ ಸ್ಟ್ರೀಟ್ ಮೊಹ್ಮದ ಮೀರಾ ಮೊಹ್ಮದ್ ಇಮ್ರಾನ್ ಶೇಖ್, ಸರ್ಪನಕಟ್ಟೆ ರವೀಂದ್ರ ಶಂಕರ ನಾಯ್ಕ ಹಾಗೂ ಗೊರಟೆ ವೆಂಕಟೇಶ ನಾಯ್ಕ ಎಂದು ತಿಳಿದು ಬಂದಿದೆ.
ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ ಈರ್ವರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ಜೀಪಿನಲ್ಲಿ ಠಾಣೆಗೆ ಕೊಂಡೊಯ್ಯಲು ಮುಂದಾಗಿದ್ದಾರೆ. ಅಷ್ಟರಲ್ಲೇ ಮುಸ್ಲಿಂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡು 'ಅವರನ್ನ ನಮಗೆ ಕೊಡಿ, ನೀವ್ಯಾಕೆ ಕರೆದೊಯ್ಯುತ್ತೀರಿ' ಎಂದು ಕೇಳಿ ಜೀಪು ತಡೆದಿದ್ದಾರೆ. ಅದಕ್ಕೆ ಸೊಪ್ಪು ಹಾಕದೆ ಪೊಲೀಸರು ಜೀಪನ್ನು ಚಲಾಯಿಸಿದ್ದು, ಇದರಿಂದಾಗಿ ಸಿಟ್ಟಿಗೆದ್ದ ಮುಸ್ಲಿಂ ಯುವಕರು ಕಲ್ಲೊಂದನ್ನ ಜೀಪಿನ ಮೇಲೆ ಎಸೆದಿದ್ದಾರೆ. ಕಲ್ಲೆಸೆತದಿಂದ ಜೀಪಿನ ಗಾಜು ಒಡೆದಿದ್ದು, ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆತಂಕವನ್ನುಂಟು ಮಾಡಿದ್ದಲ್ಲದೇ ಆರೋಪಿ ಮೊಹಮ್ಮದ್ ಮೀರಾ ಈತನು ಪೊಲೀಸ ಸಿಬ್ಬಂದಿ ಗೌತಮ ಅವರ ಬಲ ಕೈಬೆರಳುಗಳನ್ನು ತಿರುವಿ ನೋವುಪಡಿಸಿದ್ದರಿಂದ ಆರೋಪಿತರ ಮೇಲೆ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ ಜಿಪ್ ಮೇಲೆ ಹಲ್ಲೆ ನಡೆಸಿದ ಸಂಬಂಧಿಸಿದಂತೆ
ಮತ್ತೆ ಮುಂಜಾನೆ ಇಸ್ಮಾಯಿಲ್ ನೂರಾನಿ ತಂದೆ ಜಾಫರ್ ಸಾಧಿಕ,ಸೈಯದ ಸಲೀಂ ತಂದೆ ಸೈಯದ ಸನಾವುಲ್ಲಾ,
ಮೊಹಮ್ಮದ್ ಪೈಜಾನ ತಂದೆ ಅಬ್ದುಲ್ ಅಜೀಂ,
ಮೊಹಮ್ಮದ್ ಸದ್ದಾಂ ತಂದೆ ನಿಜಮುದ್ದೀನ ಸೈಯದ,
ಈ ಎಲ್ಲಾ ಆರೋಪಗಳು ಗುಳ್ಮೀ ನಿವಾಸಿಗಳನ್ನು
ವಶಕ್ಕೆ ಪಡೆದುಕೊಂಡಿದ್ದು ಇನ್ನು ಕೆಲವರ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬಿಸಿದ್ದಾರೆ.
ಪೊಲೀಸರು ಹೇಳೋದೇನು?
'ಯುವತಿಯೊಂದಿಗೆ ಯುವಕ ಅನುಚಿತವಾಗಿ ವರ್ತಿಸಿದ್ದಾನೆಂಬ ಕಾರಣಕ್ಕೆ ಗಲಾಟೆ ನಡೆದಿದ್ದು, ಪೊಲೀಸರು ಆ ಯುವಕನನ್ನು ಜೀಪಿನಲ್ಲಿ ಕರೆದುಕೊಂಡು ಬರುವ ವೇಳೆ ಆತನನ್ನ ನಮ್ಮ ವಶಕ್ಕೆ ಕೊಡಿ ಎಂದು ಗಲಾಟೆ ನಡೆಸಲಾಗಿತ್ತು. ಇದೊಂದು ಸಣ್ಣ ಘಟನೆ. ಇದಕ್ಕೆ ಸಂಬಂಧಿಸಿದಂತೆ ದೊಂಬಿ ಪ್ರಕರಣ ದಾಖಲಾಗಿದ್ದು, ಏಳು ಮಂದಿಯನ್ನ ಬಂಧಿಸಿದ್ದೇವೆ. ಸದ್ಯ ಪರಿಸ್ಥಿತಿ ತಿಳಿಯಾಗಿದೆ' ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ತಿಳಿಸಿದ್ದಾರೆ. ಬಂಧಿತ ಏಳು ಮಂದಿಯಲ್ಲಿ ಈರ್ವರು ಹಿಂದೂ ಯುವಕರು ಹಾಗೂ ಐವರು ಮುಸ್ಲಿಂ ಯುವಕರಾಗಿದ್ದಾರೆ.
ಸಹಾಯಕ ಆಯುಕ್ತೆ ಹೇಳೋದೇನು..?
ಘಟನೆ ಬಗ್ಗೆ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಸ್ ಪ್ರತಿಕ್ರಿಯಿಸಿದ್ದು ಚುನಾವಣೆ ಹಿನ್ನೆಲೆಯಲ್ಲಿ ಈ ಬಾರಿ ರಂಜಾನ್ ಮಾರ್ಕೇಟ್ ನಡೆಸಲು ಯಾವುದೇ ಅನುಮತಿ ನೀಡಿಲ್ಲ.ಹಾಗೂ ನಿನ್ನೆ ನಡೆದ ಘಟನೆ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿತ್ತಿದ್ದು ಇಂದು ರಾತ್ರಿ ತನಕ ರಂಜಾನ್ ಮಾರ್ಕೆಟ್ ನಡೆಸ ಬೇಕೋ ಬೇಡ ಎಂದು ಪರಿಸ್ಥಿತಿಗೆ ಅನುಗುಣವಾಗಿ ತೀರ್ಮಾನಿಸುತ್ತೇವೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸುತ್ತೇವೆ ಎಂದರು.