ಭಟ್ಕಳ : ಭಟ್ಕಳ ತಾಲ್ಲೂಕು ನಾಗರಿಕ ಹಿತರಕ್ಷಣಾ ಸಮಿತಿ ಭಟ್ಕಳ ತಾಲ್ಲೂಕಿನ ಎಲ್ಲಾ ಧರ್ಮ, ಜಾತಿ ಸಮುದಾಯವನ್ನು ಹಾಗು ವಿವಿಧ ಸಂಘ ಸಂಸ್ಥೆಗಳನ್ನು ಒಳಗೊಂಡ ಸಂಘಟನೆಯಾಗಿದ್ದು, ಸದರಿ ಸಂಘಟನೆಯ ಬಲವರ್ಧನೆಯ ನಿಟ್ಟಿನಲ್ಲಿ ಜವಾಬ್ದಾರಿಯುತ ಪಧಾಧಿಕಾರಿಗಳನ್ನು ನೇಮಕ ಗೊಳಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.
ಸಮಿತಿಗೆ ಇದೂವರೆಗೆ ಸಂಚಾಲಕರಾಗಿ ಭಟ್ಕಳ ಹಲವಾರು ಸಮಸ್ಯೆಯ ಕುರಿತು ಹೋರಾಟ ನಡೆಸಿಕೊಂಡು ಬಂದ ಸತೀಶಕುಮಾರ ನಾಯ್ಕರವರನ್ನು ನೂತನಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸಂಘ ಪ್ರಧಾನ ಕಾರ್ಯದರ್ಶಿಯಾಗಿ ಇಮ್ರಾನ್ ಲಂಖಾ ಹಾಗೂ ಕಾರ್ಯದರ್ಶಿಯಾಗಿ ರಾಘವೇಂದ್ರ ಎಂ ನಾಯ್ಕ ಇವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು. ಹಾಗೂ ಹೆದ್ದಾರಿ ಹೋರಾಟ ಸಮಿತಿ ಸಂಚಾಲಕ ರಾಜೇಶ ನಾಯಕ, ತಂಜೀಂ ಅಧ್ಯಕ್ಷ ಇನಾಯತುಲ್ ಶಾಬಂದ್ರಿ, ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ. ನಾಮಧಾರಿ ಸಮಾಜದ ಅಧ್ಯಕ್ಷ ಕೃಷ್ಣ ನಾಯ್ಕ,ಕಾರ್ಯದರ್ಶಿ ಭವಾನಿಶಂಕರ ನಾಯ್ಕಅರ್ಭನ ಬ್ಯಾಂಕ ಉಪಾಧ್ಯಕ್ಷ ಎಂ.ಆರ್.ನಾಯ್ಕ, ವರ್ತಕರ ಸಂಘದ ಅಧ್ಯಕ್ಷ ಶ್ರೀಧರ ಶ್ಯಾನಭಾಗ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಟಿ.ಡಿ.ನಾಯ್ಕ, ತಾಲ್ಲೂಕು ಪಂಚಾಯತ್ ಸದಸ್ಯ ಮಾಬ್ಲೇಶ್ವರ ನಾಯ್ಕ, ಲಕ್ಷಣ ನಾಯ್ಕ ಜಾಲಿ, ಸುಬೋದ ಆಚಾರ್ಯ, ನಾಗರಾಜ ಎಂ ನಾಯ್ಕ,ಅಜೀಜುರೆಹಮಾನ ರು್ಕನುದ್ದೀನ್, ಕೈಸರ ಮೊತೆಶಾಮ, ಇಮ್ತಿಯಾಜ್ ರುಕ್ನುದ್ದೀನ್, ಪಾಂಡು ನಾಯ್ಕ ಬೆಳ್ಕೆ, ಅಲ್ತಾಪ್ ಖರೂರಿ, ಇಸ್ಮಾಯಿಲ್ ಜುಬಾಪು, ಪತ್ರಕರ್ತ ರಾಧಾಕೃಷ್ಣ ಭಟ್ಟ, ಇರ್ಷಾದ ಗವಾಯಿ, ರೋಟರಿಯನ್ ಶ್ರೀನಿವಾಸ ಪಡಿಯಾರ, ಮಿಸ್ಬಾವುಲ್ ಹಕ್, ಪ್ರೋ. ಎ.ಎಂ.ಮುಲ್ಲ, ಎಸ.ಎಂ ನಾಯ್ಕ, ಮುಂತಾದವರನ್ನು ಆಡಳಿತ ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದು ಮುಂದಿನ ಸಭೆಯಲ್ಲಿ ಪಧಾಧಿಕಾರಿಗಳನ್ನು ನೇಮಿಸುವಂತೆ ಹಾಗೂ ತಾಲ್ಲೂಕಿನ ಎಲ್ಲಾ ಸಂಘ ಸಂಸ್ಥೆಗಳಅಧ್ಯಕ್ಷ ಕಾರ್ಯದರ್ಶಿಗಳನ್ನೊಳಗೊಂಡ ಸಲಹಾ ಸಮಿತಿ ರಚಿಸಿ ಚಟುವಟಿಕೆಗಳನ್ನು ಚುರುಕು ಗೊಳಿಸಲು ನಿರ್ಣಯಿಸಲಾಯಿತು.
ಸಭೆಯಲ್ಲಿ ಹೆದ್ದಾರಿ ಹೋರಾಟ ಸಮಿತಿ ಸಂಚಾಲಕ ರಾಜೇಶ ನಾಯಕ, ಭಟ್ಕಳ ತಾಲೂಕು ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಸತೀಶಕುಮಾರ, ಕಾರ್ಯದರ್ಶಿ ಇಮ್ರಾನ್ ಲಂಖಾ, ಮಜ್ಲಿಸೆ ಇಸ್ಲಾ ಒ ತಂಜಿಂ ಅಧ್ಯಕ್ಷ ಇನಾಯತುಲ್ಲ ಶಾಬಂದ್ರಿ, ಕಾರ್ಯದರ್ಶಿ ಎಂ.ಜೆ.ರಖೀಬ್, ಯುತ್ ಫೆಡರೇಶನ ಅಧ್ಯಕ್ಷ ಅಜೀಜುರೆಹಮಾನ್ , ರಿಕ್ಷಾ ಚಾಲಕ ಮಾಲಕ ಸಂಘದಅಧ್ಯಕ್ಷ ಹಾಗೂ ನಾಮಧಾರಿ ಅಭಿವ್ರದ್ದಿ ಸಂಘದಅಧ್ಯಕ್ಷ ಕೃಷ್ಣ ನಾಯ್ಕ,ಅರ್ಬನ ಬ್ಯಾಂಕ ಉಪಾಧ್ಯಕ್ಷ ಎಮ. ಆರ. ನಾಯ್ಕ ಮರ್ಚೆಂಟ್ ಅಸೋಸಿಯೇಶನ್ ಅಧ್ಯಕ್ಷ ಶ್ರೀಧರ ಶ್ಯಾನಭಾಗ, ವೇದಿಕೆಯಲ್ಲಿ ಉಪಸ್ಥಿತರಿದ್ದರು.