ಭಟ್ಕಳ: ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆಶ್ರಯದಲ್ಲಿ ಪರಿಸರ ಜಾಗೃತೆ ಮತ್ತು ಸಂರಕ್ಷಣೆ ಉದ್ದೇಶದಿಂದ ಹಮ್ಮಿಕೊಂಡಿರುವ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನಕ್ಕೆ ಸೋಮವಾರ ಭಟ್ಕಳ ತಾಲೂಕಿನ ೧೩ ಗ್ರಾಮ ಪಂಚಾಯಿತಿಯ ೩೭ ವಿವಿಧ ಹಳ್ಳಿಗಳಲ್ಲಿ ಏಕಕಾಲಕ್ಕೆ ಚಾಲನೆ ನೀಡಲಾಯಿತು.
ಈ ಕುರಿತಂತೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ, ಅರಣ್ಯವಾಸಿಗಳು ಅತ್ಯಂತ ಉತ್ಸಾಹ ಮತ್ತು ಆಸಕ್ತಿಯಿಂದ ಲಕ್ಷವೃಕ್ಷ ಅಭಿನಾಯದಲ್ಲಿ ಪಾಲ್ಗೊಂಗಡರು ಎಂದು ತಿಳಿಸಿದ್ದಾರೆ.
ಭಟ್ಕಳ ತಾಲೂಕಿನ ಮಾರುಕೇರಿ, ಬೆಳಕೆ, ಯಲ್ವಡಿಕವೂರ್, ಮಾವಿನಕುರ್ವೆ, ಬಂದರ್, ಜಾಲಿ, ಹೆಬಳೆ, ಬೆಂಗ್ರೆ, ಕೋಣಾರ, ಹಾಡುವಳ್ಳಿ ಸೇರಿಂದತೆ ೧೩ ಗ್ರಾಮ ಪಂಚಾಯತಿಯಲ್ಲಿ ಅರಣ್ಯವಾಸಿಗಳು ಯಶಸ್ವಿಯಾಗಿ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಅಭಿಯಾನದ ನೇತೃತ್ವವನ್ನು ಜಿಲ್ಲಾ ಸಂಚಾಲಕರಾದ ಪಾಂಡುರಂಗ ನಾಯ್ಕ ಬೆಳಕೆ, ದೇವರಾಜ ಗೊಂಡ, ಶಬ್ಬೀರ್ ಭಟ್ಕಳ, ರಿಜವಾನ್, ಅಬ್ದುಲ್ ಖಯ್ಯುಂ ಕೂಲಾ, ಪರಮೇಶ್ವರ ದೇವಾಡಿಗ, ಗಣಪತಿ ನಾಯ್ಕ, ಗುಂಡು ಆಚಾರಿ, ಶಂಕರ ನಾಯ್ಕ, ನಾಗಮ್ಮ, ರತ್ನ, ಲಲಿತ ಗೋಮ ಮರಾಠಿ ಮುಂತಾದವರು ವಹಿಸಿದ್ದರು.
