ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಹೊಣೆಗಾರಿಕೆ ಸ್ವೀಕಾರ ಎಪ್ರಿಲ್ 12ರಂದು : ಗಂಗಾಧರ ನಾಯ್ಕ

ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಹೊಣೆಗಾರಿಕೆ ಸ್ವೀಕಾರ ಎಪ್ರಿಲ್ 12ರಂದು : ಗಂಗಾಧರ ನಾಯ್ಕ

Sun, 10 Apr 2022 00:12:10  Office Staff   S.O. News Service

ಭಟ್ಕಳ: ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಕಾರ್ಯಕಾರಿ ಸಮಿತಿಯ ಹೊಣೆಗಾರಿಕೆ ಸ್ವೀಕಾರ ಕಾರ್ಯಕ್ರಮವು ಇದೇ ಬರುವ 12ನೇ ತಾರೀಕಿನಂದು ಮಧ್ಯಾಹ್ನ 3.30ಕ್ಕೆ ಶಿರಾಲಿಯ ಜನತಾವಿದ್ಯಾಲಯದಲ್ಲಿ  ನಡೆಯಲಿದೆ ಎಂದು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ಸಾಹಿತಿ ಬಿ.ಪಿ.ಶಿವಾನಂದ ರಾವ್ ಅವರ ಕಾದಂಬರಿ "ಆತ್ಮಸಾಕ್ಷಿ" ಬಿಡುಗಡೆ ಮತ್ತು ಉದಯೋನ್ಮುಖ ಕವಿಗಳಿಂದ ಕವಿಗೋಷ್ಠಿ ನಡೆಯಲಿದೆ. ಕಾರ್ಯಕ್ರಮವನ್ನು ಸಾಹಿತಿ ಸಯ್ಯದ್ ಙಮೀರುಲ್ಲಾ ಷರೀಫ್ ಉದ್ಘಾಟಿಸಲಿದ್ದು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಪಿ.ಶಿವಾನಂದ ರಾವ್ ಅವರ ಕೃತಿಯನ್ನು ಸಾಹಿತಿ ಆರ.ವಿ.ಸರಾಫ್  ಬಿಡುಗಡೆ ಮಾಡಲಿದ್ದು ಕೃತಿ ಪರಿಚಯವನ್ನು ಸಾಹಿತಿ ಶ್ರೀಧರ ಶೇಟ್ ಮಾಡಿಕೊಡಲಿದ್ದಾರೆ. ಸಾಹಿತಿ ಬಿ.ಪಿ.ಶಿವಾನಂದ ರಾವ್, ಜನತಾ ವಿದ್ಯಾಲಯದ ಪ್ರಾಚಾರ್ಯ ಅಮೃತ ರಾಮರಥ, ಮಾನಾಸುತ ಮುಡೇಶ್ವರ ಇವರುಗಳ ಗೌರವ ಉಪಸ್ಥಿತಿ ಇರಲಿದ್ದು, ಮುಖ್ಯ ಅತಿಥಿಗಳಾಗಿ ಕ್ಷೇತ್ರಶಿಕ್ಷಣಾಧಿಕಾರಿ ದೇವಿದಾಸ ಮೊಗೇರ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್.ನಾಯ್ಕ ಹಾಗೂ ನಿಕಟಪೂರ್ವ ತಾಲೂಕಾಧ್ಯಕ್ಷ ಶಂಕರ ನಾಯ್ಕ ಉಪಸ್ಥಿತರಿರಲಿದ್ದಾರೆ. ನಂತರದಲ್ಲಿ ಉದಯೋನ್ಮುಖ ಕವಿಗಳಿಂದ ಕವಿಗೋಷ್ಠಿ ನಡೆಯಲಿದ್ದು ಕನಕ ತೆಂಗಿನಗುಂಡಿ, ತೇಜ ಮೊಗೇರ ಬೆಳ್ಕೆ, ಯೋಗೇಶ ಹೆಗಡೆ ಮುರ್ಡೇಶ್ವರ, ಗೀತಾಭಟ್, ಜನಾರ್ಧನ ಗೊರಟೆ, ಉದಯ ನಾಯ್ಕ ಶಿರಾಲಿ, ಆನಂದ ನಾಯ್ಕ ಶಿರಾಲಿ, ಸತೀಶ ದೇವಾಡಿಗ ಮುಂಡಳ್ಳಿ, ವಾಸು ಮೊಗೇರ ತೆರ್ನಮಕ್ಕಿ, ಉಮೇಶ ನಾಯ್ಕ ಸರ್ಪನಕಟ್ಟೆ ಮುಂತಾದವರು ತಮ್ಮ ಕವನ ವಾಚಿಸಲಿದ್ದಾರೆ. ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು ಹಾಗೂ ಸಾಹಿತ್ಯಾಸಕ್ತರೆಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಗಂಗಾಧರ ನಾಯ್ಕ ಕೋರಿದ್ದಾರೆ.

 


Share: