ಭಟ್ಕಳ: ತಾಲೂಕಿನ ಜಾಲಿಯಲ್ಲಿ ಆರೆಸ್ಸೆಸ್ ಶಾಖೆಯ ವಾರ್ಷಿಕೋತ್ಸವದ ಅಂಗವಾಗಿ ಪಥ ಸಂಚಲನ ನಡೆಸಲಾಯಿತು.
ಇಲ್ಲಿನ ಜಾಲಿ ಸಿದ್ಧಿವಿನಾಯಕ ಯುವಕ ಮಂಡಳ ಮೈದಾನದಿಂದ ಹೊರಟ ಪಥ ಸಂಚಲನವು, ಜಾಲಿ ವ್ಯವಸಾಯ ಸಹಕಾರಿ ಸಂಘದ ಕಚೇರಿಯವರೆಗೆ ಸಾಗಿ ಅಲ್ಲಿಂದ ದೇವಿನಗರ ಮಾರ್ಗವಾಗಿ ಯುವಕ ಮಂಡಳ ಮೈದಾನಕ್ಕೆ ವಾಪಸ್ಸಾಯಿತು. ಪಥ ಸಂಚಲನ ಸಾಗುವ ರಸ್ತೆಗಳನ್ನು ರಂಗೋಲಿ ಹಾಕಿ ಸಿಂಗರಿಸಲಾಗಿತ್ತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ಗ್ರಾಮ ವಿಕಾಸ ಪ್ರಾಂತ ಕಾರ್ಯಕಾರಿಣಿ ಸದಸ್ಯ ರಾಜಶೇಖರ ಮಾತನಾಡಿದರು. ಕಾರ್ಯಕ್ರಮದಲ್ಲಿ ಅಶೋಕ ಮಹಾಲೆ, ಮಧು, ರವಿ ನಾಯ್ಕ, ರಾಜು, ವೆಂಕಟೇಶ, ದಯಾನಂದ, ಚರಣ, ರಜತ್ ಮತ್ತಿತರರು ಉಪಸ್ಥಿತರಿದ್ದರು. ಪಥ ಸಂಚಲನದುದ್ದಕ್ಕೂ ಬಿಗಿಯಾದ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.