ಭಟ್ಕಳ: ತಾಲೂಕಿನ ಕಡವಿನಕಟ್ಟೆ ಗುಡ್ಡರ ಸೆರಗು ಪ್ರದೇಶದಲ್ಲಿ ಚಿಂತೆ ದಾಳಿಯಿಂದ ಕರುವೊಂದು ಜೀವ ತೆತ್ತಿರುವ ಘಟನೆ ನಡೆದಿದೆ.
ಕಳೆದ 2-3 ದಿನಗಳಿಂದ ಚಿರತೆಯೊಂದು ಕಡವಿನಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಿ ಓಡಾಡಿಕೊಂಡಿದ್ದು,
ಕಡವಿಕಟ್ಟೆ ಈಶ್ವರ ನಾಯ್ಕ ಎಂಬುವವರ ಮನೆಯ ಸಮೀಪ ಅರಣ್ಯ ಪ್ರದೇಶದಲ್ಲಿ ಕರುವೊಂದು ಸತ್ತು ಬಿದ್ದಿದೆ, ಕರುವಿನ ಕುತ್ತಿಗೆ ಭಾಗದಲ್ಲಿ ಚಿರತೆ ಕಚ್ಚಿ ಗಾಯಗೊಳಿಸಿರುವುದು ಕಂಡು ಬಂದಿದೆ. ಕಡವಿನಕಟ್ಟೆ ಸುತ್ತಮುತ್ತ ಆರ್ ಎಫ್‌ಓ ಶರತ್ ಶೆಟ್ಟಿ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳ ಪರಿಶೀಲನೆ ನಡೆಸಿದ್ದಾರೆ. ಆದರೆ ಕರುವಿನ ಮಾಲಕರು ಯಾರು ಎನ್ನುವುದು ಗೊತ್ತಾಗಿಲ್ಲ,
ಒಟ್ಟಾರೆ ಅರಣ್ಯ ಪ್ರದೇಶಗಳ ಅಂಚಿನಲ್ಲಿ ಇರುವ ಭಟ್ಕಳ ತಾಲೂಕಿನ ಗ್ರಾಮಸ್ಥರು ಇತ್ತೀಚಿನ ದಿನಗಳಲ್ಲಿ ನಿದ್ದೆಯಿಲ್ಲದ ರಾತ್ರಿಗಳನ್ನು ಕಳೆಯುತ್ತಿದ್ದಾರೆ, ಕಾರಣ ಚಿರತೆ ಭಯ.ಇದೀಗ ಕಾಡಿನಿಂದ ನಾಡಿಗೆ ನುಗ್ಗುತ್ತಿರುವ ಚಿರತೆಗಳ ದಾಳಿಯಿ೦ದ ಗ್ರಾಮಸ್ಥರು ಬೆಚ್ಚಿಬೀಳುವಂತಾಗಿದೆ.
ಆಹಾರ ಅರಸಿ ಗ್ರಾಮಗಳಿಗೆ ನುಗ್ಗುತ್ತಿದೆಯೋ ಅಥವಾ ನರಮಾಂಸ ರುಚಿಕಂಡು ಅದನ್ನು ಹುಡುಕಿಕೊಂಡು ಬರುತ್ತಿದೆಯೋ?
ಒಂದು ಅಂದಾಜಿನ ಪ್ರಕಾರ ಚಿರತೆಗಳ ಸಂತತಿಯೂ ಕೂಡ ಹೆಚ್ಚಾಗುತ್ತಿದೆ ಎನ್ನಲಾಗಿದೆ. ಯಾಕಂದರೆ ಎಲ್ಲೆಂದರಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿವೆ.
ಚಿರತೆ ದಾಳಿಯ ಹಿನ್ನೆಲೆಯಲ್ಲಿ ಕಟ್ಟೆಚರ ವಹಿಸಿದ್ದೇವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.