ಭಟ್ಕಳ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಂಜುಮನ್ ಮಹಿಳಾ ಪದವಿ ಪೂರ್ವ ಕಾಲೇಜು ಶೇಕಡಾ 85.40 ಫಲಿತಾಂಶ ಗಳಿಸಿದೆ.
ಈ ಬಾರೀ 282 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 241 ಮಂದಿ ಉತ್ತೀರ್ಣರಾಗಿದ್ದಾರೆ. ಒಟ್ಟು 65 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 138 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ವಾಣಿಜ್ಯ ವಿಭಾಗ ಶೇ.90.80 ಫಲಿತಾಂಶ ಪಡೆದರೆ, ವಿಜ್ಞಾನ ವಿಭಾಗ ಶೇ.80.24 ಹಾಗೂ ಕಲಾ ವಿಭಾಗ ಶೇ.81.40 ಫಲಿತಾಂಶ ಪಡೆದಿವೆ.
ವಿಜ್ಞಾನ ವಿಭಾಗ: ಜೈನಾಬ್ ರುಕ್ನುದ್ದೀನ್ ಮೊಹಮ್ಮದ್ ಯೂಸುಫ್ ರುಕ್ನುದ್ದೀನ್ 97.50ಶೇ. ಗಳಿಸಿ ಪ್ರಥಮ ಸ್ಥಾನ ಪಡೆದರೆ, ತಸ್ಕೀನ್ ತರಬ್ ಹಿದಾಯತುಲಾ ಬುಡಾನ್ ಖಾನ್ 96.66ಶೇ, ಇನ್ಶಾರಾ ಬಾನು ಮೊಹಮ್ಮದ್ ಸೈಫುಲ್ಲಾ ಮುಅಲ್ಲಿಮ್ ಕ್ರಮವಾಗಿ 96.5 ಶೇ. ಗಳಿಸಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗ: ಯುಸ್ರಾ ಶಕೀಲ್ ಅಹ್ಮದ್ ಮುಲ್ಲಾ 96.66 ಶೇ. ಅಂಕ ಪಡೆದು ಪ್ರಥಮ ಸ್ಥಾನ ಪಡೆದರೇ, ಫಾತಿಮಾ ನಿಶ್ವಾ ಫೈಜುಲ್ ಹಕ್ ಗಂಗಾವಳಿ 95.60 ಶೇ. ಅಂಕ ಗಳಿಸಿ ದ್ವಿತೀಯ ಮತ್ತು ಮುಶ್ಫಿರಾ ಸನಾವುಲ್ಲಾ ಗಂಗಾವಳಿ 95.30 ಶೇ. ಅಂಕ ಪಡೆದು ತೃತೀಯ ಸ್ಥಾನ ಗಳಿಸಿದ್ದಾರೆ.
ಕಲಾ ವಿಭಾಗ : ಮುಸ್ಕಾನ್ ನವಾಬ್ ಖಾನ್ 96.66 ಶೇ, ಅಮೀನಾ ರುಕ್ನುದ್ದೀನ್ ಮೊಹಮ್ಮದ್ ಫೈಜ್ ರುಕ್ನುದ್ದೀನ್ 96 ಶೇ. ಮತ್ತು ಶಾಜ್ಫಾ ಇಬ್ರಾಹಿಂ ಶೇಖ್ 95.83 ಶೇ. ಅಂಕ ಗಳಿಸಿ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಅಂಜುಮನ್ ಸಂಸ್ಥೆ ಹಾಗೂ ಸಿಬ್ಬಂದಿ ವರ್ಗದವರು ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.