ಭಟ್ಕಳ : ವಿವಿಧ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಆರೋಪಿಗಳಿಗಾಗಿ ಹಲವು ಕಡೆ ತಲಾಶ್ ನಡೆದ ಘಟನೆ ಭಟ್ಕಳದಲ್ಲಿ ಮಂಗಳವಾರ ನಡೆದಿದೆ.
ಮಂಗಳವಾರ ಬೆಳಗಿನ ಜಾವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|| ಸುಮನ್ ಪೆನ್ನೆಕರ್ ಹಾಗೂ ಅಡಿಷನಲ್ ಎಸ್ಪಿ ಎಸ್. ಬದ್ರೀನಾಥ್ ಮಾರ್ಗದರ್ಶನದಲ್ಲಿ , ಭಟ್ಕಳ ಡಿವೈಎಸ್ಪಿ ಬೆಳ್ಳಿಯಪ್ಪ ಕೆ.ಯು ನೇತೃತ್ವದಲ್ಲಿ, ಸಿಪಿಐ ದಿವಾಕರ, ಮಹಾಬಲೇಶ್ವರ ನಾಯ್ಕ ಇತರೆ ಐವತ್ತು ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದರು
ಭಟ್ಕಳ ಶಹರ ಪೊಲೀಸ್ ಠಾಣಾ ಗುನ್ನಾ ನಂ. 110/2022. 800: 363. 364(a). 307. 506. 120(29) 149 geome ಆರೋಪಿಗಳು ಹಾಗೂ ಅಕ್ರಮ ದನ ಸಾಗಾಟ, ಅಕ್ರಮ ಗಾಂಜಾ ಸಾಗಾಟ, ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿಗಳ ಸಹಚರರ ಮನೆಯನ್ನು ಶೋಧಿಸಲಾಯಿತು.
ಶೋಧ ಕಾರ್ಯಚರಣೆಯಲ್ಲಿ ಭಟ್ಕಳ ಶಹರ ಪೊಲೀಸ್ ಠಾಣಿ, ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಜಾನುವಾರು ಸಾಗಾಟ, ಅಕ್ರಮ ಗಾಂಜಾ ಸಾಗಾಟ, ಮನೆಕಳ್ಳತನ, ಮತ್ತು ಸಾಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದರೋಡೆ ಪ್ರಕರಣ ಹಾಗೂ ಉಡುಪಿ ಜಿಲ್ಲೆಯಲ್ಲಿ ಪೊಕ್ಸೊ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನ ಬಂಧಿಸಲಾಗಿದೆ.
ಅಕ್ರಮ್ ಸಯ್ಯದ್ ಮೊಹಮ್ಮದ ಹುಸೇನ್ (20), ಮೊಹಮ್ಮದ್ ಇಮ್ರಾನ ಮೊಹಮ್ಮದ ಭಾಷಾ ಶೇಖ್ (33) ಎಂಬುವವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.