ಭಟ್ಕಳ : ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಸಿದ್ಧಾರ್ಥ ಪದವಿಪೂರ್ವ ಕಾಲೇಜಿನ ಫಲಿತಾಂಶ ಶೇಕಡಾ 97.45% ಬಂದಿದ್ದು, ಉತ್ತಮ ಸಾಧನೆ ಮಾಡಿದೆ.
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 187 ವಿದ್ಯಾರ್ಥಿಗಳಲ್ಲಿ 184 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡಾ 98.39 ಫಲಿತಾಂಶ ದಾಖಲಾಗಿದೆ.
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಕುಳಿತ 49 ವಿದ್ಯಾರ್ಥಿಗಳಲ್ಲಿ 46 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡಾ 93.87 ಫಲಿತಾಂಶ ದಾಖಲಾಗಿದೆ.
101 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ ಹಾಗೂ 129 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಕುಮಾರ ಹರೀಶ ಹೆಬ್ಬಾರ್ 600 ಕ್ಕೆ 591 (98.5%) ಅಂಕಗಳನ್ನು ಪಡೆದು ಪ್ರಥಮ ಸ್ಥಾನ, ಕುಮಾರಿ ಬಿ. ಎನ್. ನಮಿತಾ 600 ಕ್ಕೆ 587 (97.83%) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ ಹಾಗೂ ಕುಮಾರಿ ರಮಲಾ 600 ಕ್ಕೆ 582 (97%) ಅಂಕ ಪಡೆದು ತೃತೀಯ ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.
ಗಣಿತ ವಿಷಯದಲ್ಲಿ 22 ವಿದ್ಯಾರ್ಥಿಗಳು 100 ಕ್ಕೆ 100, ಗಣಕಯಂತ್ರ ವಿಜ್ಞಾನ ವಿಷಯದಲ್ಲಿ 7 ವಿದ್ಯಾರ್ಥಿಗಳು 100 ಕ್ಕೆ 100, ಭೌತಶಾಸ್ತ್ರ ವಿಷಯದಲ್ಲಿ 5 ವಿದ್ಯಾರ್ಥಿಗಳು 100 ಕ್ಕೆ 100, ರಸಾಯನ ಶಾಸ್ತ್ರದಲ್ಲಿ 3 ವಿದ್ಯಾರ್ಥಿಗಳು ನೂರಕ್ಕೆ ನೂರು ಹಾಗೂ ಜೀವಶಾಸ್ತ್ರ ವಿಷಯದಲ್ಲಿ ತಲಾ ಓರ್ವ ವಿದ್ಯಾರ್ಥಿ 100 ಕ್ಕೆ 100 ಅಂಕ ಪಡೆದು ಸಾಧನೆ ಗೈದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ 15 ವಿದ್ಯಾರ್ಥಿಗಳು ಅತ್ತ್ಯುನ್ನತ ಶ್ರೇಣಿಯಲ್ಲಿ ಹಾಗೂ 21 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ. ಕುಮಾರಿ ಶ್ರೇಯಾ ಖಾರ್ವಿ 600 ಕ್ಕೆ 571 ಅಂಕ (95.1%) ಪಡೆದು ಪ್ರಥಮ ಸ್ಥಾನ, ಕುಮಾರ ಜೀವನ ಮೊಗೇರ 600 ಕ್ಕೆ 569 ಅಂಕ (94.83%) ಪಡೆದು ದ್ವೀತೀಯ ಸ್ಥಾನ ಹಾಗೂ ಕುಮಾರಿ ಪೂರ್ಣಿಮಾ ನಾಯ್ಕ 600 ಕ್ಕೆ 563 ಅಂಕ (93.83%) ಪಡೆದು ತೃತೀಯ ಸ್ಥಾನ ಪಡೆದಿರುತ್ತಾರೆ.
ಲೆಕ್ಕಶಾಸ್ತ್ರದಲ್ಲಿ 2 ವಿದ್ಯಾರ್ಥಿಗಳು 100 ಕ್ಕೆ 100 ಅಂಕ, ವ್ಯವಹಾರ ಅಧ್ಯಯನ ವಿಷಯದಲ್ಲಿ 1 ವಿದ್ಯಾರ್ಥಿ 100 ಕ್ಕೆ 100 ಅಂಕ ಪಡೆದಿರುತ್ತಾರೆ.
ಸಾಧನೆ ಮಾಡಿದ ವಿದ್ದಾರ್ಥಿಗಳಿಗೆ ಆಡಳತ ಮಂಡಳಿ ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ವರ್ಗದವರು ಅಭಿನಂದಿಸಿದ್ದಾರೆ.