ಭಟ್ಕಳ: ತಾಲೂಕಿನ ಸಂಶುದ್ದೀನ್ ಸರ್ಕಲ್ ಸಮೀಪ ಕಾನೂನು ಬಾಹೀರವಾಗಿ ನಡೆಯುತ್ತಿದ್ದ ಮಟಕಾ ಅಡ್ಡೆಗಳ ಮೇಲೆ ದಾಳಿ ನಡೆಸಿರುವ ಭಟ್ಕಳ ಶಹರ ಠಾಣಾ ಪೊಲಿಸರು ಐವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇಲ್ಲಿನ ಛಾಯಾ ಹೊಟೆಲ್ ಎದುರು ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಮಟಕಾ ಜೂಜಾಟಕ್ಕೆ ಸಂಬಂಧಿಸಿದಂತೆ ತಾಲೂಕಿನ ಕೋಟೇಶ್ವರ ರೋಡ್ ನಿವಾಸಿ ಪ್ರವೀಣ ರಾಜೇಂದ್ರ ಹೊನ್ನಾವರಕರ (32) .ಹಾಗೂ ಮುಟ್ಟಳ್ಳಿ ತಲಾಂದನ: ನಾಗರಾಜ ದುರ್ಗಪ್ಪ ನಾಯ್ಕ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು,ರು.5225 ನಗದು ಹಾಗೂ ಓಸಿ ಬರೆಯಲು ಬಳಸಲಾಗಿದ್ದ ಸಲಕರಣೆಗಳನ್ನು ಪೊಲೀಸರು ಜಫ್ತುಪಡಿಸಿಕೊಂಡಿದ್ದಾರೆ. ಸದರಿ ಸ್ಥಳದಲ್ಲಿ ನಡೆಯುತ್ತಿದ್ದ ಇನ್ನೊಂದು ಮಟಕಾ ಆಡ್ಡೆಯ ಮೇಲಿನ ಪೊಲೀಸ್ ದಾಳಿ ಪ್ರಕರಣದಲ್ಲಿ ಮುಟ್ಟಳ್ಳಿ, ತಲಾಂದ ನಿವಾಸಿ ಜಗದೀಶ ಶನಿಯಾರ ನಾಯ್ಕ ಹಾಗೂ ಮುಟ್ಟಳ್ಳಿ ತಲಾಂದನ ನಾಗರಾಜ ದುರ್ಗಪ್ಪ ನಾಯ್ಕ ಎಂಬ ಇಬ್ಬರನ್ನು ಆರೋಪಿಗಳು ಎಂದು ಹೆಸರಿಸಲಾಗಿದ್ದು, ರು.5225 ನಗದು ಹಾಗೂ ಓಸಿ ಸಲಕರಣೆಗಳನ್ನು ಜಪಪಡಿಸಿಕೊಳ್ಳಲಾಗಿದೆ. ಇಲ್ಲಿನ ಸಂಶುದ್ದೀನ್ ಸರ್ಕಲ್ ಮಂಜುನಾಥ ಹೊಟೇಲ್ ಎದುರು ಸಾರ್ವಜನಿಕ ಸ್ಥಳದಲ್ಲಿ ನಡೆಯುತ್ತಿದ್ದ ಓಸಿ ಮಟಕಾ ಜೂಜಾಟಕ್ಕೆ ಸಂಬಂಧಿಸಿದಂತೆ ಇಲ್ಲಿನ ಕೋಟೇಶ್ವರ ರೋಡ್ ನಿವಾಸಿ ಸಂತೋಷ ನಾರಾಯಣ ಭಟ್ಕಳಕರ (46) ಮತ್ತು ಜಾಲಿ ತಲಗೇರಿಯ ನಾಗರಾಜ ವೆಂಕಟಪ್ಪ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿದ್ದು, ರು.1825 ನಗದು ಮತ್ತು ಓಸಿ ಜೂಜಾಟದ ಸಲಕರಣೆಗಳನ್ನು ವಶಕ್ಕೆ ಪಡೆಯಲಾಗಿದೆ. ಭಟ್ಕಳ ಶಹರ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ ಸಂತೋಷ ಕುಮಾರ ಎಮ್, ಯಲ್ಲಪ್ಪ ಎಚ್. ಮಾದರ ತನಿಖೆ ಕೈಗೊಂಡಿದ್ದಾರೆ