ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದ ಬೆಳಕೆ ಕಡಲತೀರದಲ್ಲಿ ಬಾಲಕ ನೀರುಪಾಲು

ಭಟ್ಕಳದ ಬೆಳಕೆ ಕಡಲತೀರದಲ್ಲಿ ಬಾಲಕ ನೀರುಪಾಲು

Fri, 29 Apr 2022 04:43:54  Office Staff   SO News

ಭಟ್ಕಳ : ತಾಲೂಕಿನ ಬೆಳಕೆ ಕಡಲತೀರದಲ್ಲಿ  ಈಜಲು ಹೋದ ಬಾಲಕನೋರ್ವ  ನೀರುಪಾಲಾದ ಘಟನೆ  ನಡೆದಿದೆ. 

ಶಶಾಂಕ ಮಾದೇವ ಮೊಗೇರ (16) ನೀರುಪಾಲಾದ ಬಾಲಕ ಎಂದು ಹೇಳಲಾಗಿದೆ‌.  ಗುರುವಾರ ಮಧ್ಯಾಹ್ನ ಬಾಲಕ ಊರ ಇಬ್ಬರ  ಮಕ್ಕಳ ಜೊತೆ ಕಡಲತೀರದಲ್ಲಿ ಈಜಲು ಹೋಗಿದ್ದ. ಈ ವೇಳೆ ನೀರಿನ ಸುಳಿಗೆ ಕೊಚ್ಚಿ ಹೋಗಿದ್ದಾನೆ.

ಸ್ಥಳೀಯರು ಸ್ಥಳಕ್ಕೆ ಧಾವಿಸಿ  ಬಾಲಕನಿಗಾಗಿ ಶೋಧ ನಡೆಸಿದರೂ ಪ್ರಯೋಜನವಾಗಿಲ್ಲ. ಭಟ್ಕಳ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


Share: