ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದ ಬಾಲಕ ಸೈಯದ್ ಅಕಿಫ್ ಮಲಿಕಿ ಬೆಂಗಳೂರು ವಿವಿ ಕ್ರಿಕೆಟ್ ತಂಡಕ್ಕೆ ಆಯ್ಕೆ

ಭಟ್ಕಳದ ಬಾಲಕ ಸೈಯದ್ ಅಕಿಫ್ ಮಲಿಕಿ ಬೆಂಗಳೂರು ವಿವಿ ಕ್ರಿಕೆಟ್ ತಂಡಕ್ಕೆ ಆಯ್ಕೆ

Sun, 05 Jun 2022 03:53:10  Office Staff   SO News

ಭಟ್ಕಳ: ಪಟ್ಟಣದ ಯುವ ವೇಗದ ಬೌಲರ್ ಸೈಯದ್ ಅಕಿಫ್ ಮಲಿಕಿ ಬೆಂಗಳೂರು ವಿಶ್ವವಿದ್ಯಾಲಯದ ತಂಡಕ್ಕೆ ಆಯ್ಕೆಯಾಗಿದ್ದಾರೆ.

 ಬೆಂಗಳೂರು ಅಲ್ ಅಮೀನ್ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ವರ್ಷದ ಓದುತ್ತಿದ್ದಾರೆ.  ಇವರು ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯ ತಂಡಕ್ಕೆ ವಿಶ್ವವಿದ್ಯಾನಿಲಯದ ಬ್ಲೂ ಕ್ರಿಕೆಟ್ ಆಟಗಾರರಾಗಿ ಆಯ್ಕೆಯಾಗಿದ್ದಾರೆ.

ಸೈಯದ್ ಅಕಿಫ್ ಮಲಿಕಿ ಅವರು ಜೂನ್ 6 ರಿಂದ ಜೂನ್ 15, 2022 ರವರೆಗೆ ತಮಿಳುನಾಡಿನ ಹಿಂದೂಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್, ಚೆನ್ನೈನಲ್ಲಿ ನಡೆಯಲಿರುವ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಬೆಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ.

ಸೈಯದ್  ಭಟ್ಕಳ ಅಲ್-ಎಮಾನ್ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಿದ್ದು  ಮತ್ತು ಹುಬ್ಬಳ್ಳಿಯಲ್ಲಿನ ವಿಭಾಗ ಮಟ್ಟದ ಕ್ರಿಕೆಟ್‌ನಲ್ಲಿ ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿಗೆ ಸಹ ಆಡಿದ್ದಾರೆ.

ಬೆಂಗಳೂರು ವಿಶ್ವವಿದ್ಯಾನಿಲಯ ತಂಡಕ್ಕೆ ಆಯ್ಕೆಯಾಗಿರುವ ಸೈಯದ್ ಅಕಿಫ್ ಮಲಿಕಿ ಅವರನ್ನು ಭಟ್ಕಳದ ಹಲವು ಕ್ರೀಡಾ ಸಂಸ್ಥೆಗಳು ಅಭಿನಂದಿಸುತ್ತವೆ. ಇವರು ಸಯದ್ ಅಬುಬಕರ್ ಮಲಿಕಿ‌ ಅವರ ಪಾತ್ರರಾಗಿದ್ದಾರೆ.


Share: