ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದಲ್ಲಿ ಯಶಸ್ವಿ ಹೃದಯ ರೋಗ ತಪಾಸಣಾ ಶಿಬಿರ.

ಭಟ್ಕಳದಲ್ಲಿ ಯಶಸ್ವಿ ಹೃದಯ ರೋಗ ತಪಾಸಣಾ ಶಿಬಿರ.

Tue, 26 Apr 2022 01:53:24  Office Staff   SO News

ಭಟ್ಕಳ: ಕ್ರಿಯಾಶೀಲ ಗೆಳೆಯರ ಸಂಘ ವಿವಿಧ  ಸಂಘ ಸಂಸ್ಥೆಯೊಂದಿಗೆ  ಜನರಿಗೆ ಉಪಕಾರಿಯಾಗಿರುವ    ಹೃದಯ ರೋಗ ತಪಾಸಣಾ ಶಿಬಿರವನ್ನು ನಡೆಸಿ ಜನತೆಗೆ ಉತ್ತಮ ಸೇವೆ ನೀಡಿದ್ದಾರೆ ಎಂದು  ಶಾಸಕ ಸುನೀಲ ನಾಯ್ಕ ಅಭಿಪ್ರಾಯಪಟ್ಟರು.

 ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಕ್ರಿಯಾಶೀಲ ಗೆಳೆಯರ ಸಂಘ ಇವರ ನೇತೃತ್ವದಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್, ಉ.ಕ. ಜೆ.ಸಿ.ಐ.ಭಟ್ಕಳ ಸಿ.ಟಿ. ಮತ್ತು ಕುಟುಮೇಶ್ವರ  ವಿವಿದ್ದೋದೇಶಗಳ ಸೌಹಾರ್ಧ ಸಹಕಾರಿ   ಸಂಘ ಮಾವಿನಕರ್ವೆ  ಹಾಗೂ ಭಟ್ಕಳ ಸರಕಾರಿ ಆಸ್ಪತ್ರೆ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಬೃಹತ್ ಹೃದಯ ತಪಾಸಣಾ ಶಿಬಿರ  ಉದ್ಘಾಟಿಸಿ ಮಾತನಾಡಿದರು.

ಭಟ್ಕಳದ ಸರಕಾರಿ ಆಸ್ಪತ್ರೆಯಲ್ಲಿರುವ ವೈದ್ಯರು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ರಾಜ್ಯದಲ್ಲಿಯೇ ಉತ್ತಮ ಸೇವೆ ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಜನರು ರೋಗ ಉಲ್ಬಣಗೊಂಡಾಗಲೇ ಆಸ್ಪತ್ರೆಗೆ ಹೋಗುವ ಪರಿಪಾಠವಿದೆ, ಇಂದಿನ ದಿನಗಳಲ್ಲಿ ಹೃದಯ ರೋಗದಿಂದ ಹಲವಾರು ಯುವಕರ ಮರಣ ಹೊಂದಿರುತ್ತಾರೆ. ಆದ್ದರಿಂದ ನಾವು ರೋಗ ಲಕ್ಷಣ ಕಾಣಿಸಿದಾಗಲೇ ಆಸ್ಪತ್ರೆಗೆ ಹೋಗುವ ಪರಿಪಾಟ  ಬೆಳೆಸಿಕೊಳ್ಳಬೇಕು. ನಮ್ಮೂರಿನವರೇ ಆದ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ  ಖ್ಯಾತ  ವೈದ್ಯರಾದ ಡಾ ರಾಜೇಶ  ಚಿತ್ತರಂಜನ್ ರವರ ವೈದ್ಯರ ತಂಡ ಈ ಶಿಬಿರದಲ್ಲಿ ಭಟ್ಕಳದ ಜನರಿಗೆ ಸೇವೆ ನೀಡಲು ಬಂದಿದ್ದಾರೆ. ಅವರಿಗೆ ಭಟ್ಕಳದ ಜನತೆಯ ಪರವಾಗಿ ಧನ್ಯವಾದ  ತಿಳಿಸಿದರು.

 ಸರಕಾರ ಮಾಡಬೇಕಾದ ಕೆಲಸವನ್ನು ಈ ಊರಿನ ಕ್ರಿಯಾಶೀಲ ಸಂಘದ ನೇತೃತ್ವದಲ್ಲಿ ಇತರ ಸಂಘ ಸಂಸ್ಥೆಗಳು ಸೇರಿ ಈ ಆರೋಗ್ಯ ಶಿಬಿರ ನಡೆಸುತ್ತಿದ್ದು  ಇವರಿಗೆ ಸರ್ವಜನಿಕರ ಪರವಾಗಿ ದನ್ಯವಾದ ಎಂದರು. 

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಯ ಖ್ಯಾತ  ವೈದ್ಯ ರಾದ ಡಾ ರಾಜೇಶ ಚಿತ್ತರಂಜನ್  ಮಾತನಾಡಿ  ನನ್ನ ಹುಟ್ಟೂರಿನಲ್ಲಿ  ಈ ಶಿಬಿರ ನಡೆಸುತ್ತಿರುವುದು ಹೆಮ್ಮೆಯಿದೆ. ಇಂದಿನ ಯುವಕರು ತಮ್ಮ ಜೀವನ ಶೈಲಿಯನ್ನು ಬದಲಿಸಿಕೊಂಡು ಪ್ರತಿ ದಿನ ನಡಿಗೆ, ಉತ್ತಮ ಆಹಾರ, ಹಾಗೂ ವ್ಯಸನ ಮುಕ್ತರಾಗಿ ನಾವು ನಮ್ಮ ಹೃದಯವನ್ನು  ಉತ್ತಮ ಇಟ್ಟುಕೊಳ್ಳುವುದರ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಉಪವಿಭಾಗಾಧಿಕಾರಿ ಮಮತಾದೇವಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ  ಡಾ. ಸವಿತಾ ಕಾಮತ ವಹಿಸಿ ಮಾತನಾಡಿದರು.

 ವೇದಿಕೆಯಲ್ಲಿದ್ದ ಕ್ರಿಯಾಶೀಲ ಗೆಳೆಯರ ಸಂಘದ ಅಧ್ಯಕ್ಷ ಭಾಸ್ಕರ ನಾಯ್ಕ ಮಾತನಾಡಿ,  ಸಂಘದಿಂದ ನಡೆದ ವಿವಿಧ ಜನಪರ ಕರ್ಯಕ್ರಮದ ಬಗ್ಗೆ ವಿವರಿಸಿದರು.  ವೇದಿಕೆಯಲ್ಲಿ ಡಾ. ಲಕ್ಷ್ಮೀಶ, ಕರ್ನಾಟಕ ಜರ್ನಲಿಸ್ಟ ಯೂನಿಯನ್ ನ ಜಿಲ್ಲಾದ್ಯಕ್ಷ ಮನಮೋಹನ ನಾಯ್ಕ, ಕುಟುಮೇಶ್ಚರ ಸೌಹಾರ್ಧ ಸಂಘ ದ ಅಧ್ಯಕ್ಷ ರಾಮಾ ಖಾರ್ವಿ, ಜೆ.ಸಿ.ಐ ಭಟ್ಕಳ ಸಿಟಿ ಅಧ್ಯಕ್ಷ ಪಾಂಡುರಂಗ ನಾಯ್ಕ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಂಗಳೂರು ಕೆ.ಎಂ.ಸಿ ಆಸ್ಪತ್ರೆಯ ವೈದ್ಯ ಡಾ.ರಾಜೇಶ ಚಿತ್ತರಂಜನ್ ಹಾಗೂ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಸವಿತಾ ಕಾಮತ ಅವರನ್ನು ಸಂಘಟಕರ ಪರವಾಗಿ ಸನ್ಮಾನಿಸಲಾಯುತು.

ಕುಮಾರಿ ಸಿಂಚನಾ ಈಶ್ವರ ನಾಯ್ಕ ಪ್ರಾರ್ಥನೆ  ಹಾಡಿದರು.
ಪ್ರಾರಂಭದಲ್ಲಿ ಕ್ರಿಯಾಶೀಲ ಸಂಘ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.‌ ಭವಾನಿ ಶಂಕರ ನಾಯ್ಕ ವಂದಿಸಿದರು. ಕಾರ್ಯಕ್ರಮವನ್ನು ರಮೇಶ 
ಖಾರ್ವಿ ನಿರ್ವಹಿಸಿದರು.   

ಒಟ್ಡು 220 ಕ್ಕೂ ಅಧಿಕ ಮಂದಿ ಶಿಬಿರದ ಪ್ರಯೋಜನ ಪಡೆದರು. 211 ಹೆಚ್ಚು ಜನರು ಇಸಿಜಿ ಪರೀಕ್ಷೆ,  35 ಜನರು ಇಕೋ ಪರೀಕ್ಷೆ ಹಾಗೂ 32 ಜನರು ಟಿ.ಎಂ. ಟಿ. ಪರೀಕ್ಷೆ ಮಾಡಿಕೊಂಡರು.  ಬೆಳಿಗ್ಗೆ 10 ಗಂಟೆಗೆ ಪ್ರಾರಂಭವಾದ ಈ ಶಿಬಿರ ಸಂಜೆ 5 ಗಂಟೆಯವರೆಗೆ ನಡೆದ ಶಿಬಿರ ಸಾರ್ವಜನಿಕರ  ಮೆಚ್ಚುಗೆಗೆ ಪಾತ್ರವಾಯಿತು.


Share: