ಭಟ್ಕಳ: ತಾಲೂಕಿನ ಸುನ್ನಿ ಮರ್ಕಝಿ ಇದ ಮಿಲಾದ ಆಚರಣೆ ಸಮಿತಿಯ ಆಶ್ರಯದಲ್ಲಿ ಇದಾರ ಎ ಫೈಜರಸೂಲ್, ತಾಜುಸುನ್ನ ಹಜರತ್ ಇಸ್ಮಾಯಿಲ್ ಸುನ್ನಿ ಮದ್, ಮದರಸಾ ನೂರುಲ್ಲಹುದಾ ಸರ್ಪನಕಟ್ಟೆ ಜಮಾತ್, ಐಸ್ ಫ್ಯಾಕ್ಟರಿ, ಕೋಕ್ತಿನಗರ, ಬದ್ರೀಯಾ ಕಾಲೋನಿ, ಬೆಂಡೇಕಾನ್ ಸೇರಿದಂತೆ ತಾಲೂಕಿನ ವಿವಿಧ 18 ಭಾಗಗಳ ಮುಸ್ಲಿಮ್ ಧರ್ಮೀಯರು ಪ್ರವಾದಿ ಮಹ್ಮದ್ ಪೈಗಂಬರರ ಹುಟ್ಟು ಹಬ್ಬದ ಅಂಗವಾಗಿ ಸಡಗರ ಸಂಭ್ರಮದೊಂದಿಗೆ ಮೆರವಣಿಗೆ ನಡೆಸಿದರು.
ಇಲ್ಲಿನ ದಿ ನ್ಯೂ ಇಂಗ್ಲೀಷ್ ಸ್ಕೂಲ್ ಆವರಣದ ಎದುರಿನಿಂದ ಹೊರಟ ಮೆರವಣಿಗೆಯು ಸಂಶುದ್ದೀನ್ ಸರ್ಕಲ್, ಪಿಎಲ್ ಡಿ ಬ್ಯಾಂಕ್ ವೃತ್ತ, ಹಳೆಬಸ್ ನಿಲ್ದಾಣ, ಸುಲ್ತಾನ್ ಸ್ಟ್ರೀಟ್, ಹೂವಿನ ಚೌಕ್, ಮಾರುಕಟ್ಟೆ ಮಾರ್ಗವಾಗಿ ಹಳೆಬಸ್ ನಿಲ್ದಾಣ ಪಕ್ಕದ ಮೈದಾನದಲ್ಲಿ ಅಂತ್ಯ ಕಂಡಿತು. ನೂರಾರು ಶ್ವೇತ ವಸ್ತ್ರಧಾರಿ ಮುಸ್ಲಿಮ್ ಧರ್ಮೀಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮೆರವಣಿಗೆಯುದ್ದಕ್ಕೂ ಪ್ರವಾದಿಯ ಹೆಸರಿನಲ್ಲಿ ಜಯಘೋಷಗಳು ಮೊಳಗಿದವು. ಪ್ರವಾದಿ ಗುಣಗಾನದ ಗೀತೆಗಳು, ದಫ್ ವಾದನ, ಕುಣಿತ ಜನರ ಗಮನ ಸೆಳೆದವು. ಸುನ್ನಿ ಮರ್ಕಝಿ ಈದ್ ಮಿಲಾದ್ ಆಚರಣೆ ಸಮಿತಿಯ ಅಧ್ಯಕ್ಷ ಖಾಜಾ ಹಸನ್ ಖಲೈವಾಲಾ, ಸಂಚಾಲಕ ಮುನೀರ್ ಅಹ್ಮದ್ ಶೇಖ್, ಖಾಜಾ ಅಹ್ಮದ್ ಖಲೈವಾಲಾ, ಕೆ.ಎಂ. ಶರೀಫ್, ಮೌಲಾನಾ ಅಹ್ಮದ್ ಜಿಫ್ರಿ ಅಕ್ರಮಿ, ಡಾ.ಫಾರೂಖಿ, ಅಬ್ದುಲ್ ಸತ್ತಾರ್ ಶೇಖ್, ಆಸೀಫ್ ಫೀರ್, ಉಮ್ಮರ್ ಹಾಷಿಮಿ, ಮಹ್ಮದ್ ಇದೀಸ್ ಹಬಿಬುಲ್ಲಾ ಚಡಾಪ, ಮೌಲಾನಾ ಆರೀಫ್ ಸಾದಿ ಶಫಿ ಬ್ಯಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮುಖ್ಯ ಅತಿಥಿಯಾಗಿ ಅಸೈಯದ್ ಕರಕಿ ತಂಗಳ ಉಪಸ್ಥಿತರಿದ್ದರು. ಡಿವಾಯ್ ಎಸ್ಪಿ ಕೆ.ಯು. ಬೆಳ್ಳಿಯಪ್ಪ, ಸಿಪಿಐ ದಿವಾಕರ ಮಾರ್ಗದರ್ಶನ ಎಸ್ಯೆ ಭರತ್, ಎಸೈ ಬಿ. ಸುಮಾ,ಎಸ್‌ಐ ಹನುಮಂತ ಕುಡಗುಂಟಿ ನೇತೃತ್ವದಲ್ಲಿ ಮೆರವಣಿಗೆಯುದ್ದಕ್ಕೂ ಬಿಗಿಯಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.