ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ

ಭಟ್ಕಳದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ

Sun, 02 Oct 2022 01:48:47  Office Staff   S O News

ಭಟ್ಕಳ: ಸಮಾಜದ ಸ್ವಾಸ್ಥ್ಯವನ್ನು ಕಾಪಾಡಲು ಆರೋಗ್ಯದೊಂದಿಗೆ ಪರಿಸರದ ಬಗ್ಗೆಯೂ ಕಾಳಜಿ ಅವಹಿಸುವುದು ಅತ್ಯಗತ್ಯ ಎಂದು ಪಶ್ವಿಮಘಟ್ಟ ಸಂರಕ್ಷಣಾ ಪ್ರಾಧಿಕಾರದ ಅಧ್ಯಕ್ಷ ಗೋವಿಂದ ನಾಯ್ಕ ಹೇಳಿದರು.

ಅವರು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ  ಭಟ್ಕಳ ತಾಲೂಕು ಆಸ್ಪತ್ರೆ,  ಶ್ರೀನಿವಾಸ ಮೆಡಿಕಲ್ ಕಾಲೇಜು ಸುರತ್ಕಲ್,  ಪತ್ರಕರ್ತರ ಸಂಘ ಭಟ್ಕಳ, ಕ್ರೀಯಾಶೀಲ ಗೆಳೆಯರ ಸಂಘ, ಜಿ.ಎಸ್.ಎಸ್ ಭಟ್ಕಳ , ತಂಜೀಮ್  ಭಟ್ಕಳ, ಬ್ರಹ್ಮಶ್ರೀ ನಾರಾಯಣ ಗುರು ಸಂಘ, ಸ್ಪಂದನ ಚಾರಿಟೇಬಲ್ ಟ್ರಸ್ಟ್ ಭಟ್ಕಳ ಇವರ ಆಶ್ರಯ ಹಮ್ಮಿಕೊಂಡ  ಬೃಹತ್ ಹೃದಯ ಹಾಗೂ ಕ್ಯಾನ್ಸರ್  ಆರೋಗ್ಯ ತಪಾಸಣಾ ಶಿಬರವನ್ನು ಉದ್ಘಾಟಿಸಿ ಮಾತನಾಡಿದರು.

ರೋಗ ಉಲ್ಭಣವಾಗುವುದಕ್ಕೆ ಮೊದಲೇ  ಸೂಕ್ತ ವೈದ್ಯರಲ್ಲಿ ಕಾಲ ಕಾಲಕ್ಕೆ  ತಪಾಸಣೆ ಮಾಡಿದಾಗ ಮಾತ್ರ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದ ಅವರು ಆರೋಗ್ಯದೊಂದಿಗೆ ನಮ್ಮ ಪರಿಸರವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಂಡಾಗ ಮಾತ್ರ ನಾವು ಉತ್ತಮ ಆರೋಗ್ಯವನ್ನು ಪಡೆಯಬಹುದು. ಪ್ರತಿಯೊಬ್ಬರು ಉತ್ತಮ ಆರೋಗ್ಯಕ್ಕಾಗಿ ನಮ್ಮ ಸುತ್ತ ಮುತ್ತ ಗಿಡಗಳನ್ನು ಬೆಳಸಿ ಪರಿಸರವನ್ನು ಉಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀನಿವಾಸ ಆಸ್ಪತ್ರೆಯ ಹೃದಯರೋಗ ತಜ್ಞ ಡಾ. ಸುಬ್ರಮಣ್ಯ ಮಾತನಾಡಿ ಇಂದಿನ ತಾಂತ್ರಿಕ ಜೀವನ ಶೈಲಿಯಿಂದ  ಮನುಷ್ಯರು ಬೇಗ ರೋಗವನ್ನು ಅಂಟಿಸಿಕೊಳ್ಳುತ್ತಿದ್ದಾನೆ. ಹೃದಯ ಕಾಯಿಲೆ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ  ಹ್ರದಯ ರೋಗ  ಬರದ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದ ಅವರು  ವ್ಯಾಯಾಮ,  ಕಲಕಾಲಕ್ಕೆ ನಿದ್ರೆ, ಉತ್ತಮ ಆಹಾರ,  ಉತ್ತಮ ಮಾನಸಿಕ ಸ್ವಸ್ಥತೆಯನ್ನು ಕಾಪಾಡಿಕೊಂಡಾಗ  ಹೃದಯ ರೋಗವನ್ನು ತಡೆಗಟ್ಟಬಹುದು ಎಂದರು.

ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸವಿತಾ ಕಾಮತ ಮಾತನಾಡಿ  ಭಟ್ಕಳದಲ್ಲಿ ಹೃದಯ ರೋಗ ಹಾಗೂ ಮಹಿಳೆಯರ ಸ್ಥನ ಕ್ಯಾನ್ಸ ರೋಗಿಗಳು ಹೆಚ್ಚಿನ ಸಂಕ್ಯೆಯಲ್ಲಿ ಆಸ್ಪತ್ರೆಗೆ ಬರುತ್ತಿರುವುದರಿಂದ ನಾವು ಈ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದು ಇದರ ಸದುಪಯೋಗ ಭಟ್ಕಳದ ಜನತೆ ಪಡೆಯುವಂತಾಗಲಿ ಎಂದರು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಭಟ್ಕಳ ಉಪವಿಭಾಗಾದಿಕಾರಿ ಮಮತಾದೇವಿ  ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀನಿವಾಸ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರೋಜಾರಿಯೋ, ಡಾ. ಸಂಗೀತಾ, ಪುರಸಭೆ ಸದಸ್ಯೆ ರಜನಿ ಪ್ರಭು ಉಪಸ್ಥಿತರಿದ್ದರು.

ಪತ್ರಕರ್ತ ವಿಷ್ಣು ದೇವಾಡಿಗ ಸ್ವಾಗತಿಸಿದರು. ಪಾಂಡುರಂಗ ನಾಯ್ಕ ವಂದನಾರ್ಪಣೆ ಮಾಡಿದರು. ಮಂಜುನಾಥ ಮುಂಡಳ್ಳಿ ಕಾರ್ಯಕ್ರಮ ನಿರೂಪಿಸಿದರು. 


Share: