ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದಲ್ಲಿ ಬದಲಾವಣೆಗಾಗಿ ಅವಕಾಶ ನೀಡಿ-ಜೆ.ಡಿ.ಎಸ್. ಅಭ್ಯರ್ಥಿ ನ್ಯಾಯವಾದಿ ನಾಗೇಂದ್ರ ನಾಯ್ಕ

ಭಟ್ಕಳದಲ್ಲಿ ಬದಲಾವಣೆಗಾಗಿ ಅವಕಾಶ ನೀಡಿ-ಜೆ.ಡಿ.ಎಸ್. ಅಭ್ಯರ್ಥಿ ನ್ಯಾಯವಾದಿ ನಾಗೇಂದ್ರ ನಾಯ್ಕ

Thu, 20 Apr 2023 02:01:40  Office Staff   SOnews

ಭಟ್ಕಳ: ಸಾವಿರಾರು ಜೆ.ಡಿ.ಎಸ್ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಇನಾಯತುಲ್ಲಾ ಶಾಬಂದ್ರಿ ಅಭಿಮಾನಿಗಳು ಬೃಹತ್ ಮೆರವಣೆಗೆ ನಡೆಸುವುದರ ಮೂಲಕ ಜೆ.ಡಿ.ಎಸ್. ಅಭ್ಯರ್ಥಿ ನ್ಯಾಯಾವಾದಿ ನಾಗೇಂದ್ರ ನಾಯ್ಕರು ಬುಧವಾರ ಇಲ್ಲಿನ ಮಿನಿ ವಿಧಾನಸೌಧದ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು. 

ನಂತರ ಮಾಧ್ಯಮವದವರೊಂದಿಗೆ ಮಾತನಾಡಿದ ಅವರು, ಭಟ್ಕಳ ಕ್ಷೇತ್ರದ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ. ಬದಲಾವಣೆಗಾಗಿ ಈ ಬಾರಿ ನನಗೊಂದು ಅವಕಾಶ ಕೊಡಿ. ರಾಷ್ಟಿçಯ ಪಕ್ಷದ ಅಭ್ಯರ್ಥಿಗಳನ್ನು ಈಗಾಗಲೆ ಜನ ಕಂಡಾಗಿದೆ ಎಂದರು. ಹಿಂದುತ್ವ ಅಲೆ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ರಸ್ತೆ ಮೇಲೆ ಕಾಣುತ್ತಿರುವುದು ಹಿಂದುತ್ವ ಅಲ್ಲ. ನಾನೂ ಕೂಡ ಒಬ್ಬ ಹಿಂದೂ, ನಮ್ಮ ಧರ್ಮ, ಜಾತಿಗಳನ್ನು ಮನೆಯಂಗಳಕ್ಕೆ ಸೀಮಿತವಾಗಿಟ್ಟುಕೊಳ್ಳಬೇಕು ಎಂದ ಅವರು, ತಮ್ಮ ಜೆ.ಡಿ.ಎಸ್ ಪಕ್ಷ ಇದೇ ಸಿದ್ದಾಂತವನ್ನು ಹೊಂದಿದೆ. ನಮ್ಮದು ರೈತರ ಪಕ್ಷ, ರೈತರ ಪರ ಹೋರಾಟ ಮಾಡುವವರು, ಇಲ್ಲಿನ ದುಡ್ಡಿನ ಬಲ ನಡೆಯುವುದಿಲ್ಲ ಎಂದರು. ಇಲ್ಲಿನ ಅರಣ್ಯ ಅತಿಕ್ರಮಣ ಸಮಸ್ಯೆಗಳಿಗೆ ಪರಿಹಾರ ಖಂಡಿತ ಇದೆ. ಕಾನೂನು ರೀತಿಯಲ್ಲಿ ಅದಕ್ಕೆ ತಕ್ಕ ಪರಿಹಾರ ಕಂಡುಕೊಳ್ಳುವಳ್ಳಿ ನನ್ನಲ್ಲಿ ಪ್ಲಾನ್ ಇದೆ. ನಾನು ಶಾಸಕನಾದಲ್ಲಿ ಇದನ್ನು ಖಂಡಿತವಾಗಿ ಮಾಡಿಯೇ ತೀರುತ್ತೇನೆ ಎಂದರು. 

ಜೆ.ಡಿ.ಎಸ್. ಮುಖಂಡ ಇನಾಯತುಲ್ಲಾ ಶಾಬಂದ್ರಿ ಮಾತನಾಡಿ, ನ್ಯಾಯವಾದಿ ನಾಗೇಂದ್ರ ನಾಯ್ಕ ಒಬ್ಬ ಒಳ್ಳೆಯ ಅಭ್ಯರ್ಥಿಯಾಗಿದ್ದು ಒಂದು ಹೊಸ ಮುಖ ನಮಗೆ ಸಿಕ್ಕಿದೆ. ೨೦೧೩ ರಲ್ಲಿ ಜೆ.ಡಿ.ಎಸ್ ಗೆ ಉತ್ತಮ ಬೆಂಬಲ ನೀಡಿದ್ದೀರಿ ಆದರೆ ಗೆಲುವು ಸಾಧ್ಯವಾಗಿಲ್ಲ. ಈಬಾರಿ ಜೆ.ಡಿ.ಎಸ್ ಗೆ ಅಧಿಕಾರಕ್ಕೆ ತನ್ನಿ ಎಂದರು. 
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರು ಇದ್ದರು. 
 


Share: