ಭಟ್ಕಳ: ಜಿಲ್ಲೆಗೆ ಆಗಮಿಸಿದ ಎಡಿಜಿಪಿ ಅಲೋಕ ಕುಮಾರ ಭಟ್ಕಳ ಠಾಣೆಗೆ ಬೇಟಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೆ ಪರಿಹಾರ ಸೂಚಿಸಿದರು.
ನಂತರ ಮಾತನಾಡಿದ ಅವರು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವಾಗ ಯಾವುದೆ ಧರ್ಮದ ರ್ಯಾಲಿಗಳಿಗೆ ಅವಕಾಶ ನಿರಾಕರಿಸಲಾಗಿದೆ. ಇತ್ತೀಚಿಗೆ ಭಟ್ಕಳದಲ್ಲಿ ಇಂತಹದೊAದು ಪ್ರಕರಣ ನಡೆದಿದ್ದು ಸಂಬAಧಪಟ್ಟ ಅಧಿಕಾರಿಯ ಮೇಲೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದರು ಜಿಲ್ಲೆಯಲ್ಲಿ ಪೊಲೀಸ್ ವ್ಯವಸ್ಥೆ ಸುದೃಡಗೊಳ್ಳುತ್ತಿದ್ದು ಪೊಲೀಸರ ಜಾಗೃತತಂಡ ಅನೈತಿಕ ಚಟುವಟಿಕೆಗಳ ನಿಗಾ ಇಟ್ಟಿದ್ದು ಇತ್ತೀಚಿಗೆ ಗಾಂಜಾ ಪತ್ತೆಯಾದ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಭಟ್ಕಳದಲ್ಲಿ ಗೋಮಾಂಸ ಮಾರಾಟ ಮಾಡುತ್ತಿದ್ದಾರೆ ಎನ್ನುವ ಹಿಂದೂ ಕಾರ್ಯಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಕಾನೂನು ರೀತಿಯಲ್ಲಿ ಅಂತವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವದು. ಗಾಂಜಾ ಪ್ರಕರಣ ಪತ್ತೆಯಾದ ಬಳಿಕ ಅವರ ನೆಟವರ್ಕ ಭೇದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಟಿಎಚ್ಒ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಯ ಪತ್ತೆಗೆ ಪೊಲೀಸರು ಈಗಾಗಲೆ ಬಲೆ ಬೀಸಿದ್ದು ಕೂಡಲೆ ಆರನನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಭಟ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ನಕಲಿ ಐಡಿಗಳ ಹಾವಳಿ, ವ್ಯಕ್ತಿಗಳ ತೇಜೊವಧೆ ಇಂತಹ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ದೂರುಗಳು ಬಂದಿದ್ದು ಅವೆಲ್ಲವನ್ನು ತನಿಖೆ ನಡೆಸಿ ಅಂತವರ ಹೆಡೆಮೂರೆ ಕಟ್ಟಲು ಎಸ್ಪಿ ಅವರಿಗೆ ಸೂಚನೆ ನೀಡಿದ್ದೇನೆ. ಇನ್ನು ಭಟ್ಕಳದಲ್ಲಿ ಟ್ರಾಫಿಕ್ ಸ್ಟೇಶನ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಸ್ತಾವನೆ ಕಳುಹಿಸಿ ಅದನ್ನು ಮಂಜೂರಿ ಮಾಡಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದರು. ಐಜಿಪಿ ಡಾ. ಚಂದ್ರಗುಪ್ತ, ಕಾರವಾರ ಎಸ್.ಪಿ ಎನ್ ವಿಷ್ಣುವರ್ದನ, ಭಟ್ಕಳ ಡಿವೈಎಸ್ಪಿ ಶ್ರೀಕಾಂತ ಕೆ ಇತರರು ಇದ್ದರು.