ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳದಲ್ಲಿ ಏಳು ತಿಂಗಳ ಮಗುವಿನ ತಾಯಿ ಆತ್ಮಹತ್ಯೆ

ಭಟ್ಕಳದಲ್ಲಿ ಏಳು ತಿಂಗಳ ಮಗುವಿನ ತಾಯಿ ಆತ್ಮಹತ್ಯೆ

Sun, 22 Oct 2023 05:41:38  Office Staff   SO News

ಭಟ್ಕಳ: ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯ ಅಡುಗೆ ಕೊನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗ್ರೆ ಮಾವಿನಕಟ್ಟೆಯಲ್ಲಿ ನಡೆದಿದೆ. 

ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಶೈಲಾ ನಾಗೇಶ ದೇವಾಡಿಗ (29) ಎಂದು ತಿಳಿದು ಬಂದಿದೆ. ಈಕೆ ಏಪ್ರಿಲ್ 17, 2022 ರಂದು ಮಾವಿನಕಟ್ಟಾ ನಿವಾಸಿಯಾದ ನಾಗೇಶ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದು, ಮದುವೆ ಆದಾಗಿನಿಂದ ಗಂಡನೊಂದಿಗೆ ಒಳ್ಳೆಯ ರೀತಿಯಿಂದ ಸಂಸಾರ ಮಾಡಿಕೊಂಡಿದ್ದವಳಿಗೆ ರಕ್ಷಿತ ಎಂಬಾ 7 ತಿಂಗಳ ಗಂಡು ಮಗು ಇದೆ.ಆದರೆ ಸದ್ಯ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ತನ್ನ ಕುತ್ತಿಗೆಗೆ ಶಾಲಿನಿಂದ ಕಟ್ಟಿಕೊಂಡು ಮನೆಯ ಅಡುಗೆ ಕೋಣೆಯ ಜಂತಿಗೆ ಕಟ್ಟಿ ಉರುಳು ಹಾಕಿಕೊಂಡವಳನ್ನು  ಭಾವ ಹಾಗೂ ಅವರ ಮನೆಯವರು ಉರುಳು ಹಾಕಿಕೊಂಡ ಬಟ್ಟೆಯನ್ನು ಕತ್ತರಿಸಿ ಶೈಲಾಳಿಗೆ ಭಟ್ಕಳ, ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದು ಆಸ್ಪತ್ರೆಯ ವೈದ್ಯರು ತಪಾಸಣೆ ನೀಡಿ ಸಾವನ್ನಪ್ಪಿರುವ ಖಚಿತ ಪಡಿಸಿದ್ದಾರೆ. 

ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ


Share: