ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಕುಂದಾಪುರ: ಬದುಕಿಗೆ ಕೇವಲ ಆಹಾರ ಮಾತ್ರ ಮುಖ್ಯವಲ್ಲ. ಗೌರವಯುತ ಜೀವನಕ್ಕೆ ಕಾನೂನಿನ ಅರಿವು ಅಗತ್ಯ - ನ್ಯಾ.ಜಾವೇದ್ ರಹೀಮ್

ಕುಂದಾಪುರ: ಬದುಕಿಗೆ ಕೇವಲ ಆಹಾರ ಮಾತ್ರ ಮುಖ್ಯವಲ್ಲ. ಗೌರವಯುತ ಜೀವನಕ್ಕೆ ಕಾನೂನಿನ ಅರಿವು ಅಗತ್ಯ - ನ್ಯಾ.ಜಾವೇದ್ ರಹೀಮ್

Tue, 06 Oct 2009 03:25:00  Office Staff   S.O. News Service
ಕುಂದಾಪುರ, ಅ.5: ಬದುಕಿಗೆ ಕೇವಲ ಆಹಾರ ಮಾತ್ರ ಮುಖ್ಯವಲ್ಲ. ಗೌರವಯುತ ಜೀವನಕ್ಕೆ ಕಾನೂನಿನ ಅರಿವು ಅಗತ್ಯ. ಆದರೆ ಮಾನವನ ಬದುಕಿಗಿಂತ ಯಾವುದೇ ಧರ್ಮವಾಗಲಿ ಕಾನೂನಾಗಲಿ ಹೆಚ್ಚಲ್ಲ ಎಂದು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಉಡುಪಿ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಜಾವೇದ್ ರಹೀಮ್ ಅಭಿಪ್ರಾಯ ಪಟ್ಟಿದ್ದಾರೆ.

ಕುಂದಾಪುರ ತಾಲೂಕು ಕಾನೂನು ಸೇವಾ ಸಮಿತಿ, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಕೋಡಿ ಬ್ಯಾರೀಸ್ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಜರಗಿದ ‘ಕಾನೂನು ಮತ್ತು ಆರೋಗ್ಯ ಮಾಹಿತಿ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಜಿಲ್ಲಾ ನ್ಯಾಯಾಧೀಶರ ಸೇವೆ ಜನಸಾಮಾನ್ಯರನ್ನು ಸರಿಯಾಗಿ ತಲುಪುತ್ತಿಲ್ಲ. ಕಾನೂನು ಸೇವೆಯ ಮೂಲಕ ಜನಸಾಮಾನ್ಯರಲ್ಲಿ ಕಾನೂನು ಅರಿವನ್ನು ಮೂಡಿಸಲು ಸಾಧ್ಯ. ಇದರಿಂದ ತಮ್ಮ ಹಕ್ಕುಗಳನ್ನು ತಾವೇ ರಕ್ಷಿಸಿಕೊಳ್ಳಬಹುದೆಂದು ಅವರು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕೆ.ಬಿ.ಚಂಗಪ್ಪ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಚಂದ್ರ ಬಾಯರಿ, ಕುಂದಾಪುರ ನ್ಯಾಯಾಲಯದ ಪೀಠಾಸೀನಾಧಿಕಾರಿ ಶಿವಣ್ಣ ಮಾತನಾಡಿದರು.

ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಜಿ ಮಾಸ್ತರ್ ಮೆಹಮೂದ್ ಅಧ್ಯಕ್ಷತೆ ವಹಿಸಿದ್ದರು. ಕಾನೂನು ಮತ್ತು ಸೇವಾ ಸಮಿತಿಯ ಅಧ್ಯಕೆ ನ್ಯಾಯಾಧೀಶೆ ಕೆ.ಜಿ.ಚಿಂತಾ, ಸಿವಿಲ್ ನ್ಯಾಯಾಧೀಶೆ ಗೀತಾಂಜಲಿ, ಬ್ಯಾರೀಸ್ ಶಿಕ್ಷಣ ಸಂಸ್ಥೆಯ ನಿರ್ದೇಶಕ ಡಾ.ಜಿ.ಎಚ್.ಪ್ರಭಾಕರ  ಶೆಟ್ಟಿ, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ರಾಮಣ್ಣ ಶೆಟ್ಟಿ ಉಪಸ್ಥಿತರಿದ್ದರು. 

ಉಪನ್ಯಾಸಕ ಸಂದೀಪ್ ಕುಮಾರ್ ಶೆಟ್ಟಿ ವಂದಿಸಿದರು. ಶ್ರೀಧರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Share: