ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೈಲೂರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಮೊಗೇರ ಅವರಿಗೆ ಬೀಳ್ಕೊಡುಗೆ

ಬೈಲೂರು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ನಾಗೇಂದ್ರ ಮೊಗೇರ ಅವರಿಗೆ ಬೀಳ್ಕೊಡುಗೆ

Tue, 29 Aug 2023 06:34:55  Office Staff   SO News

ಭಟ್ಕಳ:ಭಟ್ಕಳ ಹೊನ್ನಾವರ ಶಾಸಕ ಹಾಗೂ ಮೀನುಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಆಪ್ತ ಸಹಾಯಕರಾಗಿ ಸರಕಾರದಿಂದ ನೇಮಕಗೊಂಡ ಹಿನ್ನೆಲೆಯಲ್ಲಿ ಬೈಲೂರು ಪಿಡಿಓ ಸ್ಥಾನದಿಂದ ಮೇಲ್ಬಡ್ತಿಯಾದ ಕಾರಣ ಅವರನ್ನು ಸೋಮವಾರದಂದು ಬೈಲೂರು ಗ್ರಾಮ ಪಂಚಾಯತ್ ಪಿಡಿಓ ಸ್ಥಾನದಿಂದ ಪಂಚಾಯತ ವತಿಯಿಂದ ಬೀಳ್ಕೋಡಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾ.ಪಂ.ಬೈಲೂರು ಅಧ್ಯಕ್ಷ ಕ್ರಷ್ಣ ನಾಯ್ಕ ಬಲಸೆ ' ಬೈಲೂರು ಗ್ರಾಮದಲ್ಲಿ ಕಳೆದ 5 ವರ್ಷಗಳಿಂದ ಗ್ರಾಮದ ಅಭಿವ್ರದ್ದಿ ಅಧಿಕಾರಿಗಳಾಗಿ ಹಲವಾರು ಜನಪರ ಕಾರ್ಯದ ಮೂಲಕ ಗ್ರಾಮದ ಜನರ ಮೆಚ್ಚುಗೆ ಗಳಿಸಿರುವ ಇವರು ಒಬ್ಬ ಮಾದರಿ ಸರಕಾರಿ ನೌಕರರಾಗಿ ಗ್ರಾಮದಲ್ಲಿ ಕೆಲಸ ನಿರ್ವಹಿಸಿದ್ದಾರೆ. ವ್ರತ್ತಿ ಧರ್ಮವನ್ನು ಚಾಚುತಪ್ಪದೇ ಸಾಮಾನ್ಯ ಜನರ ಏಳಿಗೆಗೆ ಶ್ರಮಿಸುತ್ತಾ ಗ್ರಾಮದ ಅಭಿವ್ರದ್ದಿಗಾಗಿ ದುಡಿದು ಜನಸಾಮಾನ್ಯರ ನೆಚ್ಚಿನ ಅಧಿಕಾರಿಗಳು ಸಚಿವರಾದ ಮಂಕಾಳ ವೈದ್ಯರ ಆಪ್ತಸಹಾಯಕರಾಗಿ ಆಯ್ಕೆ ಆಗಿದ್ದು ಹೆಮ್ಮೆಯ ವಿಷಯ ನಿಮ್ಮ ಜನಪರ ಕಾರ್ಯ ಹೀಗೆ ಮುಂದುವರಿಯಲಿ ಸರಕಾರಿ ಸೇವೆ ಜನರಿಗೆ ಮುಟ್ಟುವಂತಾಗಾಲಿ ಎಂದು ನಮ್ಮ ಹಾರೈಕೆ ಎಂದರು.
ಇದೇ ಸಂಧರ್ಭದಲ್ಲಿ ಪಿಡಿಓ ನಾಗೇಂದ್ರ ಮೋಗೇರ  ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ ಬೀಳ್ಕೋಡಲಾಯಿತು.
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತ ಉಪಾಧ್ಯಕ್ಷ, ಸರ್ವ ಸದಸ್ಯರು ಕಾರ್ಯದರ್ಶಿಗಳು ಸಿಬ್ಬಂದಿಗಳು ಇದ್ದರು.


Share: