ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬೈಂದೂರು:ಆ್ಯಂಬುಲೆನ್ಸ್ ಭೀಕರ ಅಪಘಾತದಲ್ಲಿ 4 ದುರ್ಮರಣ

ಬೈಂದೂರು:ಆ್ಯಂಬುಲೆನ್ಸ್ ಭೀಕರ ಅಪಘಾತದಲ್ಲಿ 4 ದುರ್ಮರಣ

Thu, 21 Jul 2022 05:57:00  Office Staff   SO NEWS

ಬೈಂದೂರು: ರೋಗಿಗಳ ಪ್ರಾಣ ಉಳಿಸುವ ಉದ್ದೇಶದಿಂದ ಆ್ಯಂಬುಲೆನ್ಸ್ ಚಾಲಕರು ಶತಪ್ರಯತ್ನ ಮಾಡುತ್ತಿರುತ್ತಾರೆ. ಆದರೆ ದುರ್ದೈವ ಸಂಗತಿಯೆಂದರೆ ವೇಗವಾಗಿ ಬಂದ ಆ್ಯಂಬುಲೆನ್ಸ್ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ಗೆ ಡಿಕ್ಕಿ ಹೊಡೆದಿದ್ದು ನಾಲ್ವರು ದುರ್ಮರಣ ಹೊಂದಿದ್ದಾರೆ.

ಆ್ಯಂಬುಲೆನ್ಸ್ ಮೂಲಕ ರೋಗಿಯನ್ನು ಹೊನ್ನಾವರದಿಂದ ಮಣಿಪಾಲಕ್ಕೆ  ಸಾಗಿಸಲಾಗುತ್ತಿತ್ತು, ಆದರೆ ಟೋಲ್ ಗೆ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದಿದ್ದು ಆಂಬುಲೆನ್ಸ್ ನಲ್ಲಿದ ಲೋಕೇಶ್ ಮಾದೇವ ನಾಯ್ಕ್, ಪತ್ನಿ ಗೀತಾ ಲೋಕೇಶ್ ನಾಯ್ಕ್, ರೋಗಿ ಗಜಾನನ ನಾಯ್ಕ್ ಮತ್ತು ಮಂಜುನಾಥ್ ನಾಯ್ಕ್ ದುರ್ಮರಣ ಹೊಂದಿದ್ದಾರೆ.

ಅಪಘಾತದಲ್ಲಿ ಟೋಲ್ ಸಿಬ್ಬಂದಿ ಹಾಗೂ ಚಾಲಕ ರೋಷನ್ ರೋಡ್ರಿಗಸ್ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಪಘಾತದ ದೃಶ್ಯ ಟೋಲ್ ಗೇಟ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.


Share: