ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬ೦ಟ್ವಾಳ: ಸ್ಕಾಎಫ್ ಧರಿಸಿದ ವಿದ್ಯಾರ್ಥಿನಿಯರಿಗೆ ರ್‍ಯಾಗಿಂಗ್: ದೂರು

ಬ೦ಟ್ವಾಳ: ಸ್ಕಾಎಫ್ ಧರಿಸಿದ ವಿದ್ಯಾರ್ಥಿನಿಯರಿಗೆ ರ್‍ಯಾಗಿಂಗ್: ದೂರು

Tue, 27 Oct 2009 02:53:00  Office Staff   S.O. News Service

ಬಂಟ್ವಾಳ, ಅ.೨೫: ಬಿ.ಸಿರೋಡು ಕಾಲೇಜಿನಲ್ಲಿ ಸ್ಕಾರ್ಫ್ ವಿವಾದ ಮತ್ತೆ ಸುದ್ದಿಗೆ ಗ್ರಾಸ ವಾಗಿದೆ. ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಕಾರ್ಫ್ ಧರಿಸಿದ್ದ ಕೆಲ ವಿದ್ಯಾರ್ಥಿನಿಯರಿ ಗೆ ಕಾಲೇಜಿನ ವಿದ್ಯಾರ್ಥಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಸ್ಕಾರ್ಫ್ ತೆಗೆಯುವಂತೆ ಒತ್ತಡ ಹೇರಿದ ಘಟನೆಯೊಂದು ನಡೆದಿರುವ ಬಗ್ಗೆ ವರದಿಯಾಗಿದೆ.

ಈ ಬಗ್ಗೆ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜಿನ ಪ್ರಾಂಶುಪಾಲರಿಗೆ ದೂರು ನೀಡಿದ್ದಾ ರೆ. ಶುಕ್ರವಾರ ಕಾಲೇಜಿನ ಆವರಣದಲ್ಲಿ ಕಾಲೇಜು ವಿದ್ಯಾರ್ಥಿಗಳಾದ ಆದಿತ್ಯ, ಹರಿಪ್ರಸಾ ದ್, ಅಜಯ್ ಶೆಟ್ಟಿ, ಜೀವನ್, ಪ್ರೇಮ್ ಕುಮಾರ್, ಜಗದೀಶ್ ಹಾಗೂ ಗಿರೀಶ್ ಎಂಬವರು ಅವಾಚ್ಯ ಶಬ್ದಗಳಿಂದ ನಿಂದಿಸಿ ತಮ್ಮ ಮೇಲೆ ರ್‍ಯಾಗಿಂಗ್ ನಡೆಸಿದ್ದಾರೆ,

ಸ್ಕಾರ್ಫ್ ಧರಿಸಿದ್ದಕ್ಕೂ ನಿಂದಿಸಿದ್ದಾರೆ ಎಂದು ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಮುಂದಿನ ಎರಡು ದಿನಗಳ ಒಳಗಾಗಿ ಈ ಬಗ್ಗೆ ವಿಚಾರಣೆ ನಡೆಸುವುದಾಗಿ ಪ್ರಾಂಶುಪಾ ಲರು ಭರವಸೆ ನೀಡಿದ್ದಾರೆ ಎಂದು ದೂರು ನೀಡಿರುವ ವಿದ್ಯಾರ್ಥಿಗಳು ಪತ್ರಿಕೆಗೆ ತಿಳಿಸಿ ದ್ದಾರೆ.

ಎಚ್ಚರಿಕೆ ನೀಡಲಾಗಿದೆ...

ಮತ್ತೆ ಉದ್ಭವಗೊಂಡಿರುವ ಸ್ಕಾರ್ಫ್ ವಿವಾದದ ಬಗ್ಗೆ ಕಾಲೇಜಿ ಪ್ರಾಂಶುಪಾಲ ಪ್ರೊ. ಕೇಶವಯ್ಯರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ``ನಡೆದಿರುವ ಘಟನೆಯ ಬಗ್ಗೆ ವಿದ್ಯಾರ್ಥಿನಿಯರು ದೂರು ನೀಡಿದ್ದಾರೆ. ಆರೋಪಿ ವಿದ್ಯಾರ್ಥಿಗಳನ್ನು ಛೇಂಬರಿಗೆ ಕರೆಸಿ ಎಚ್ಚರಿಕೆ ನೀಡಲಾಗಿದೆ. ಅನಗತ್ಯ ವಿಚಾರಗಳಿಗೆ ತಲೆ ಹಾಕದಂತೆ ಹಾಗೂ ಪರೀಕ್ಷೆ ಹಾ ಗೂ ಶಿಕ್ಷಣದ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಲಾಗಿದೆ" ಎಂದು ತಿಳಿಸಿದ್ದಾರೆ


Share: