ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಹುಬ್ಬಳ್ಳಿ- ಅಂಕೋಲ ರೈಲು ಮಾರ್ಗ ಖಚಿತ; ಬೆಂಗಳೂರು- ಮಂಗಳೂರು - ಉಡುಪಿ- ಕಾರವಾರ ರೈಲು ಮಾರ್ಗ ಕಾರ್ಯಗತಕ್ಕೆ ಖಂಡಿತ ಪ್ರಯತ್ನ: ಮೊಯ್ಲಿ ಭರವಸೆ

ಹುಬ್ಬಳ್ಳಿ- ಅಂಕೋಲ ರೈಲು ಮಾರ್ಗ ಖಚಿತ; ಬೆಂಗಳೂರು- ಮಂಗಳೂರು - ಉಡುಪಿ- ಕಾರವಾರ ರೈಲು ಮಾರ್ಗ ಕಾರ್ಯಗತಕ್ಕೆ ಖಂಡಿತ ಪ್ರಯತ್ನ: ಮೊಯ್ಲಿ ಭರವಸೆ

Mon, 01 Mar 2010 03:09:00  Office Staff   S.O. News Service

ನವದೆಹಲಿ: ಅರಣ್ಯ ನಾಶದ ಆತಂಕದ ಹಿನ್ನೆಲೆಯಲ್ಲಿ ಪರಿಸರ ಅನುಮೋದನೆಯ ತೊಡಕು ಎದುರಿಸುತ್ತಿರುವ ಹುಬ್ಬಳ್ಳಿ- ಅಂಕೋಲ ರೈಲು ಮಾರ್ಗ ನಿರ್ಮಾಣಕ್ಕೆ ಕೇಂದ್ರ `ಒಂದಲ್ಲ ಒಂದು ದಾರಿ'ಯನ್ನು ಕಂಡು ಹಿಡಿದು ಕಾರ್ಯಗತಗೊಳಿಸಿಯೇ ತೀರುತ್ತದೆ ಎಂದು ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಶನಿವಾರ ಇಲ್ಲಿ ಸಾರಿದರು.

ಸುರಂಗ ಮಾರ್ಗ ನಿರ್ಮಿಸುವ ಆಲೋಚನೆಯೂ ಉಂಟು. ಅರಣ್ಯ ನಾಶದ ಪ್ರಮಾಣವನ್ನು ಅತ್ಯಂತ ಕನಿಷ್ಠಕ್ಕೆ ತಗ್ಗಿಸಿ ಈ ಮಾರ್ಗ ನಿರ್ಮಿಸುವ ಉಪಾಯ ಕಂಡು ಹಿಡಿಯುತ್ತೇವೆ. ಅರಣ್ಯ, ಪರಿಸರ ಸಚಿವ ಜೈರಾಮ್ ರಮೇಶ್ ಈ ಸಂಬಂಧ ನಮ್ಮ ಜೊತೆಗಿದ್ದಾರೆ.

ಅರಣ್ಯದಲ್ಲೇ ಹಾದು ಬಂದಿರುವ ಕೊಂಕಣ ರೈಲು ಮಾರ್ಗ ನಿರ್ಮಾಣದ ಹೊತ್ತಿನಲ್ಲೂ ಇಂತಹು ದೇ ಆತಂಕಗಳಿದ್ದವು. ಕೊಂಕಣ ರೈಲು ಮಾರ್ಗದ ಆರ್ಥಿಕ ಕಾರ್ಯಸಾಧ್ಯತೆಯ ಕುರಿತೂ ಪ್ರಶ್ನೆಗಳು ಎದ್ದಿದ್ದವು. ಆದರೆ ಇಂದು ಈ ಆತಂಕಗಳು ಮತ್ತು ಪ್ರಶ್ನೆಗಳು ನಿವಾರಣೆ ಆಗಿಲ್ಲವೇ? ಎಂದು ಅವರು ಪ್ರಶ್ನಿಸಿದರು.ಪರಿಸರ ಅನುಮೋದನೆಯನ್ನು ಎದುರಿಸಿರುವ ಶಿವಮೊಗ್ಗ- ತಾಳ ಗುಪ್ಪ ರೈಲು ಮಾರ್ಗ ಕೂಡ ಅತ್ಯಂತ ಮಹತ್ತರ ಅಭಿವೃದ್ಧಿಯ ಹೆಬ್ಬಾಗಿಲು ತೆರೆಯುವಂತಹುದು. ಈ ಯೋಜನೆ ಕಾರ್ಯಗತವಾಗುವಂತೆ ಮಾಡುತ್ತೇವೆ ಎಂದು ಅವರು ಹೇಳಿದರು.

ಬೆಂಗಳೂರು- ಗೋವಾ (ಮಂಗಳೂರು- ಉಡುಪಿ- ಕಾರವಾರ ಮಾರ್ಗವಾಗಿ) ಮತ್ತು ಮುಂಬಯಿ- ಮಂಗಳೂರು (ಕೊಂಕಣ ರೇಲ್ವೆ ವಲಯ) ರೇಲ್ವೆ ಸಂಪರ್ಕ ಸಾಧನೆ ಕೇಂದ್ರ ಸರ್ಕಾರದ ಮುಂದಿದೆ. ಮುಂದಿನ ವರ್ಷವಾದರೂ ಸಾಕಾರಗೊಳ್ಳಿಲಿದೆ ಎಂದರು.ತಮ್ಮ `ತವರು' ದಕ್ಷಿಣ ಕನ್ನಡ ಮತ್ತು `ಗಂಡನ ಮನೆ' ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ಎರಡಕ್ಕೂ ಈ ರೇಲ್ವೆ ಬಜೆಟ್‌ನಲ್ಲಿ ನ್ಯಾಯ ಒದಗಿಸಿರುವ ಕುರಿತು ತೃಪ್ತಿ ಪ್ರಕಟಿಸಿದ ಅವರು ಈ ಯೋಜನೆಗಳ ವಿವರಗಳನ್ನು ಮತ್ತೊಮ್ಮೆ ಸುದ್ದಿಗಾರರಿಗೆ ನೀಡಿದರು.


Share: