ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬಿಪಿಸಿಎಲ್ ಖಾಸಗೀಕರಣ ಪ್ರಸ್ತಾವ ಕೈಬಿಟ್ಟ ಕೇಂದ್ರ

ಬಿಪಿಸಿಎಲ್ ಖಾಸಗೀಕರಣ ಪ್ರಸ್ತಾವ ಕೈಬಿಟ್ಟ ಕೇಂದ್ರ

Fri, 27 May 2022 18:32:23  Office Staff   Vb

ಹೊಸದಿಲ್ಲಿ: ಬಿಡ್‌ದಾರರ ಕೊರತೆಯಿಂದಾಗಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿಮಿಟೆಡ್ ನಲ್ಲಿ (ಬಿಪಿಸಿಎಲ್) ತಾನು ಹೊಂದಿರುವ ಸಂಪೂರ್ಣ ಶೇ. 52.92ರಷ್ಟು ಷೇರುಗಳನ್ನು ಮಾರಾಟ ಮಾಡುವ ಮೂಲಕ ಕಂಪೆನಿಯನ್ನು ಖಾಸಗೀಕರಣಗೊಳಿಸುವ ತನ್ನ ಪ್ರಸ್ತಾವವನ್ನು ಕೇಂದ್ರ ಸರಕಾರ ಗುರುವಾರ ಹಿಂತೆಗೆದುಕೊಂಡಿದೆ. 

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಪರಿಸ್ಥಿತಿಗಳಿಂದಾಗಿ ಪ್ರಸ್ತುತ ಖಾಸಗೀಕರಣ ಪ್ರಕ್ರಿಯೆಯಲ್ಲಿ ಹೆಚ್ಚಿನ ಬಿಡ್‌ದಾರರು ಭಾಗವಹಿಸಲು ಸಾಧ್ಯವಾಗದ ಕಾರಣ ಬಿಪಿಸಿಎಲ್‌ನಲ್ಲಿ ತನ್ನ ಶೇ. 52.92ರಷ್ಟು ಪಾಲನ್ನು ಮಾರಾಟ ಮಾಡುವ ಪ್ರಸ್ತಾವವನ್ನು ಹಿಂದೆಗೆಯಲಾಗಿದೆ ಎಂದು ಹೂಡಿಕೆ ಮತ್ತು ಆಸ್ತಿ ನಿರ್ವಹಣೆ ಇಲಾಖೆ ತಿಳಿಸಿದೆ.

ಬಿಪಿಸಿಎಲ್‌ನ ತನ್ನ ಸಂಪೂರ್ಣ ಶೇ. 52.98ರಷ್ಟು ಪಾಲನ್ನು ಮಾರಾಟ ಮಾಡಲು ಕೇಂದ್ರ ಸರಕಾರ ಯೋಜಿಸಿತ್ತು. ಮಾರ್ಚ್ 2020ರಲ್ಲಿ ಬಿಡ್‌ದಾರರನ್ನು ಆಹ್ವಾನಿಸಿತ್ತು. ನವೆಂಬರ್ 2020ರ ವೇಳೆ ಮೂರು ಬಿಡ್ ಗಳು ಸಲ್ಲಿಕೆಯಾಗಿದ್ದವು.


Share: