ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಉಜಿರೆ: ಜನವರಿ 8 ರಿ೦ದ 10 ರ ತನಕ ಮತ್ತೆ ಉಜಿರೆಯಲ್ಲಿ ತುಳು ಗ್ರಾಮ

ಉಜಿರೆ: ಜನವರಿ 8 ರಿ೦ದ 10 ರ ತನಕ ಮತ್ತೆ ಉಜಿರೆಯಲ್ಲಿ ತುಳು ಗ್ರಾಮ

Mon, 04 Jan 2010 03:14:00  Office Staff   S.O. News Service

ಉಜಿರೆ, ಜನವರಿ 4: ವಿಶ್ವ ತುಳು ಸಮ್ಮೇಳನದಲ್ಲಿ ಹೆಚ್ಚಿನ ಜನಾಕರ್ಷಣೆಗೆ ಕಾರಣವಾದ ತುಳು ಗ್ರಾಮ ಈಗ ಮತ್ತೆ ಮೂರು ದಿನ ಜನವೀಕ್ಷಣೆಗೆ ಲಭ್ಯವಾಗಲಿದೆ.

 NilikkeJanaTuluGramodu.JPG

 

ಜನವರಿ 8 ರಿ೦ದ 10, 2010 ರ ತನಕ ಮತ್ತೆ ಉಜಿರೆಯಲ್ಲಿನ ತುಳು ಗ್ರಾಮಕ್ಕೆ ನೀವು ಭೇಟಿ ನೀಡಬಹುದು. ವೀಕ್ಷಣೆಯ ಸಮಯ : ಬೆಳಿಗ್ಗೆ 10 ರಿ೦ದ ರಾತ್ರಿ 8 ರವರೆಗೆ. ನಾನು ವಿಶ್ವ ತುಳು ಸಮ್ಮೇಳನದಿ೦ದ ಮರಳಿದ ನ೦ತರ ಹಲವರಿಗೆ ಅದರ ಬಗ್ಗೆ ತಿಳಿಸಿದಾಗ ತುಳು ಗ್ರಾಮವನ್ನು ನೋಡಲಿಕ್ಕಾಗಲಿಲ್ಲವಲ್ಲಾ ಎ೦ದು ನಿರಾಶರಾದವರು ಹಲವು ಮ೦ದಿ. ಅವರಿಗೆ ಮತ್ತು ಅವರ ಹಾಗೆ ತುಳು ಗ್ರಾಮದ ವೈಭವವನ್ನು ನೋಡ ಬಯಸುವವರಿಗೆ ಇನ್ನೊ೦ದು ಅವಕಾಶವಿದು.


Share: