ಕಾರವಾರ : ಜಿಲ್ಲೆಯ ಕರಾವಳಿಯಲ್ಲಿ ಕುಂಭದ್ರೋಣ ಮಳೆ ಆರ್ಭಟ ಮುಂದುವರಿದಿದೆ.
ಗುರುವಾರ ಬೆಳಿಗ್ಗೆಯಿಂದ ಎಡೆಬಿಡದೇ ಮಳೆ ಸುರಿದಿದ್ದರಿಂದ ಕಾರವಾರ ತಾಲೂಕಿನ ಬಿಣಗಾ, ಒಕ್ಕಲಕೇರಿ, ಚೆಂಡಿಯಾ, ಇಡೂರು, ಅರಗಾದಲ್ಲಿ ಹಲವು ಮನೆಗಳು ಜಲಾವೃತವಾಗಿದೆ. ಸ್ಥಳೀಯ ನಿವಾಸಿಗಳು ತೊಂದರೆ ಅನುಭವಿಸಿದ್ದಾರೆ
ಹೊಸಾಳಿ, ಮುಡಗೇರಿ ಭಾಗದಲ್ಲಿ ಹೆಚ್ಚಿನ ಮಳೆಯಾಗಿದ್ದರಿಂದ ರಸ್ತೆಗಳು, ತಗ್ಗು ಪ್ರದೇಶಗಳು ಜಲಾವೃತವಾಗಿದ್ದವು. ಕಾರವಾರ ತಹಶೀಲ್ದಾರ ನಿಶ್ಚಲ್ ನರೋನಾ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಮಟಾ ಪಟ್ಟಣದ ರಾ. ಹೆದ್ದಾರಿಯ ಸಮೀಪ ಒಂದೆ ಸಮನೆ ಗಾಳಿ ಬೀಸಿದ್ದರಿಂದ ಇಪ್ಪತ್ತಕ್ಕೂ ಹೆಚ್ಚು ಮರಗಳು ಧರೆಗುರುಳಿದೆ. ಘಟನೆಯಲ್ಲಿ ಎರಡು ಬೈಕ್ ಜಖಂಗೊಡಿದೆ. ನಾಲ್ಕು ಮನೆಗಳಿಗೆ ಹಾನಿಯಾಗಿದೆ. ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.