ಭಟ್ಕಳ:ತಾಲೂಕಿನ ಸಾಗರ ರಸ್ತೆಯ ಕಡವಿನಕಟ್ಟೆ ಕ್ರಾಸ್ ಬಳಿಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಆಟೋ ನಡುವೆ ಅಪಘಾತ ಸಂಭವಿಸಿ ಅಟೋ ಚಾಲಕ ಸಹಿತ ಪ್ರಯಾಣಿಕರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಗಾಯಗೊಂಡಿರುವವರನ್ನು ಆಟೋ ಚಾಲಕ ಜಟ್ಟಾ ನಾಯ್ಕ ಮತ್ತು ಪ್ರಯಾಣಿಕರಾದ ಹೊನ್ನಾವರ ಬಳಕೂರಿನ ಜಯಂತಿ ಪೈ, ಹಳಿಯಾಳದವರಾದ ಸತೀಶ್ ರಾಮಚಂದ್ರ ಹುನ್ಸ್ವಾಡ್ಕರ್, ಸೌಮ್ಯ ಸತೀಶ್ ಹುನ್ಸ್ವಾಡ್ಕರ್,ಹಲ್ಯಾಣಿಯ ನಿವಾಸಿ ಮಾಹಲಕ್ಷ್ಮೀ ಕಿಣಿ ಎಂದು ಗುರುತಿಸಲಾಗಿದೆ.
ಗಾಯಾಳುಗಳಲ್ಲಿ ಅಟೋ ಚಾಲಕ ಜಟ್ಟಾ ನಾಯ್ಕ ಹಾಗೂ ಬಳಕೂರಿನ ಜಯಂತಿ ಪೈ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ಚಿಕಿತ್ಸೆಗಾಗಿ ಇಲ್ಲಿನ ಸರಕಾರಿ ಅಸ್ಪತ್ರೆಗೆ ದಾಖಲಿಸಲಾಗಿದೆ.
ಆಟೋ ಭಟ್ಕಳದ ಕಡೆಯಿಂದ ಸಾಗರ ರಸ್ತೆಯಲ್ಲಿ ಮಾರುಕೇರಿ ಕಡೆಗೆ ಹೋಗುತ್ತಿದ್ದರೆ, ಕೆ.ಎಸ್.ಆರ್.ಟಿ.ಸಿ. ಬಸ್ಸು ಡಿಪೋದಿಂದ ಭಟ್ಕಳದ ಕಡೆಗೆ ಬರುತ್ತಿತ್ತು ಎನ್ನಲಾಗಿದೆ. ಈ ಬಗ್ಗೆ ಭಟ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.