ಶಿರಸಿ : ಅಡಿಕೆ ಕಳ್ಳತನ ಮಾಡಿದ್ದ ನಾಲ್ವರು ಆರೋಪಿಗಳನ್ನ ಶಿರಸಿಯ ಬನವಾಸಿ ಪೊಲೀಸರು ಬಂಧಿಸಿದ್ದಾರೆ.
ಭದ್ರಾವತಿ ಮೂಲದ ಅವಿನಾಶ ಮಂಜಪ್ಪ, ನರೇಂದ್ರ ಮಂಜಪ್ಪ, ಸಚಿನ್ ಶಿವಕುಮಾರ, ಲೋಕೇಶ ರಮೇಶ ಬಂಧಿತರು. ಕೆಲ ದಿನಗಳ ಹಿಂದೆ ಬನವಾಸಿಯ ಹೊಳೆಮಠದಲ್ಲಿ ಅಬ್ದುಲ್ ಕರೀಮ್ ಅಬ್ದುಲ್ ರವೂತ್ ಶೇಖ್ ಎಂಬುವವರಿಗೆ ಸೇರಿದ್ದ ಅಡಿಕೆ ತೋಟದಲ್ಲಿ ಆರು ಕ್ವಿಂಟಲ್ ಅಡಿಕೆ ಕಳ್ಳತನ ಮಾಡಿದ್ದರು.
ಬನವಾಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ನಾಲ್ವರು ಆರೋಪಿಗಳನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.