ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಬನವಾಸಿಯಲ್ಲಿ ಮನೆ ಕಳ್ಳತನ ಆರೋಪಿಗಳ ಸೆರೆ

ಬನವಾಸಿಯಲ್ಲಿ ಮನೆ ಕಳ್ಳತನ ಆರೋಪಿಗಳ ಸೆರೆ

Tue, 27 Sep 2022 03:42:50  Office Staff   SO News

ಶಿರಸಿ : ತಾಲೂಕಿನ ಬನವಾಸಿ ಗ್ರಾಮದ  ಮನೆ  ಕಳ್ಳತನ ಮಾಡಿದ್ದ ನಾಲ್ವರು ಖದೀಮರನ್ನು ಬನವಾಸಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಜನತಾ ಕಾಲೋನಿಯ  ಮಹಮ್ಮದ್ ಕೈಫ್ ಶಿರಗೋಡ (19),  ವಿಶ್ವ ಮಹೇಶ ಪಾವಸ್ಕರ (21),  ಯಾಸೀನ್ ಬಾಷಾಸಾಬ್ ( 18 ),  ರಿಯಾಜ್ ಚೌಧರಿ(19) ಬಂಧಿತರು.

ಆರೋಪಿಗಳು  ಸೆಪ್ಟೆಂಬರ್ ಏಳರಂದು ಬನವಾಸಿಯ ಖಲೀಲ ಅಬ್ದುಲ್ ಅಜೀಂ ಶೇಖ್ ಎಂಬುವರ ಮನೆಯಲ್ಲಿ ಕಳ್ಳತನ ನಡೆಸಿದ್ದರು. ಮನೆಯಲ್ಲಿಟ್ಟಿದ್ದ ಸುಮಾರು 2.55 ಲಕ್ಷ ರೂ. ನಗದು ಹಣ ಹಾಗೂ 4 ಗ್ರಾಂ ತೂಕದ ಬಂಗಾರದ ಉಂಗುರಗಳನ್ನು ಕಳ್ಳತನ ಮಾಡಿದ್ದರು.
ಬಂಧಿತರಿಂದ ಹಣ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎಸ್. ಪಿ. ಡಾ ಸುಮನ್ ಪೆನ್ನೆಕರ್ ಮಾರ್ಗದರ್ಶನದಲ್ಲಿ ಶಿರಸಿ ಡಿವೈಎಸ್ಪಿ ರವಿ ನಾಯ್ಕ,  ಸಿ.ಪಿ.ಐ ರಾಮಚಂದ್ರ ನಾಯಕ ನೇತೃತ್ವದಲ್ಲಿ ಪಿಎಸ್‌ಐಗಳಾದ ಹನುಮಂತ ಬಿರಾದರ ಹಾಗೂ ಚಂದ್ರಕಲಾ ಪತ್ತಾರ, ಸಿಬ್ಬಂದಿಗಳಾದ ರಮೇಶ ನಾಯ್ಕ,  ಸಂತೋಷ, ಪ್ರಸಾದ ಮಡಿವಾಳ, ಬಸವರಾಜ್ ಜಾಡರ, ಎಮ್. ಮೈಲಾರಪ್ಪ ಉದಯ ಗುನಗಾ,  ಕಾರ್ಯಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


Share: