ಜಲಮಂಡಳಿಯಿಂದ ಸುಗಮ ನೀರು ಪೂರೈಕೆಗೆ ಕ್ರಮ
ಹುಬ್ಬಳ್ಳಿ : ಹುಬ್ಬಳ್ಳಿ - ಧಾರವಾಡ ಅವಳಿ ನಗರದಲ್ಲಿ ಸುಗಮ ನೀರು ಪೂರೈಕೆ ಕುರಿತಂತೆ ಬೇಸಿಗೆಯಲ್ಲಿ ನೀರಿನ ಸಮಸ್ಯೆ ತೀವ್ರವಾಗಿರುತ್ತದೆ . ಇದಕ್ಕೆ ಮುಖ್ಯವಾಗಿ ವಿತರಣಾ ಕೊಳವೆಗಳ ಗುಣಮಟ್ಟ ಹಾಗೂ ವಿನ್ಯಾಸ ಸರಿ ಇಲ್ಲದ್ದರಿಂದ ಪದೇ ಪದೇ ಸೋರುವುದು , ಹೊಸ ಬಡಾವಣೆಗಳಲ್ಲಿ ಅವಶ್ಯವಿರುವ ಜಲಸಂಗ್ರಹಾಗಾರಗಳು ಇಲ್ಲದಿರುವುದು , ಸಗಟು ನೀರಿನ ಪೂರೈಕೆ ಪ್ರಮಾಣ ಅವಶ್ಯಕತೆಗಳನುಣವಾಗಿ ಇಲ್ಲದಿರುವುದು , ಹೊಸ ಬಡಾವಣೆಗಳಿಗೆ ನೀರು ಪೂರೈಕೆ ವಿಸ್ತರಣೆ ಹಾಗೂ ವಿದ್ಯುತ್ ವ್ಯತಯ ಕಾರಣವಾಗಿರುತ್ತದೆ .
ಈಗ ವಿದ್ಯುತ್ ಪೂರೈಕೆ ಪರಿಸ್ಥಿತಿಯು ಸುಧಾರಿಸುತ್ತಿರುವುದರಿಂದ ಪ್ರತಿ ೫-೬ ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ . ಸದ್ಯದಲ್ಲೇ ಪ್ರತಿ ೫ ದಿನಗಳಿಗೊಮ್ಮೆ ನೀರು ಪೂರೈಕೆ ಮಾಡಲಾಗುವುದು . ಅದರ ಜೊತೆಗೆ ಅವಶ್ಯಕತೆಗೆ ಅನುಗುಣವಾಗಿ ಅವಳಿ ನಗರಗಳ ವಿವಿಧ ಪ್ರದೇಶಗಳಲ್ಲಿರುವ ಸುಮಾರು ೧೦೪೦ ವಿದ್ಯುತ್ ಚಾಲಿತ ಹಾಗೂ ೫೪೬ ಕೈಪಂಪ್ಗಳ ಕೊಳವೆ ಬಾವಿಗಳ ಮುಖಾಂತರ ನೀರು ಪೂರೈಸಲಾಗುತ್ತಿದೆ . ಇದಲ್ಲದೇ ಸುಮಾರು ೩೦ ಟ್ಯಾಂಕರ್ಗಳ ಮುಖಾಂತರ ಸಮಸ್ಯಾತ್ಮಕ ಪ್ರದೇಶಗಳಿಗೆ ನೀರು ಪೂರೈಸಲಾಗುತ್ತಿದೆ . ಈಗ ಚಾಲ್ತಿಯಲ್ಲಿರುವ ಯೋಜನೆಗಳು ಪೂರ್ಣಗೊಂಡ ನಂತರ ನೀರು ಪೂರೈಕೆಯಲ್ಲಿ ಗಮನಾರ್ಹ ಸುಧಾರಣೆ ಆಗಲಿದೆ . ಆದುದರಿಂದ ಸಾರ್ವಜನಿಕರು ಜಲಮಂಡಳಿಯ ಜೊತೆಗೆ ಸಹಕರಿಸಲು ಕಾರ್ಯಪಾಲಕ ಅಭಿಯಂತರರ ಪ್ರಕಟಣೆ ತಿಳಿಸಿದೆ .