ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪಡುಬಿದ್ರಿ:ಡಿಸೆಂಬರ್ 26ರಂದು ಎರ್ಮಾಳಿನಲ್ಲಿ ಅಂತರ್ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯ

ಪಡುಬಿದ್ರಿ:ಡಿಸೆಂಬರ್ 26ರಂದು ಎರ್ಮಾಳಿನಲ್ಲಿ ಅಂತರ್ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯ

Thu, 24 Dec 2009 03:29:00  Office Staff   S.O. News Service
ಪಡುಬಿದ್ರಿ, ಡಿಸೆಂಬರ್ 23:ತೆಂಕ ಎರ್ಮಾಳಿನ ಶ್ರೀನಾರಾಯಣ ಗುರು ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಇದೇ 26ರಂದು ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಲಿದೆ ಎಂದು ಕ್ಲಬ್‌ನ ಅಧ್ಯಕ್ಷ ದೀಪಕ್ ಕುಮಾರ್ ಎರ್ಮಾಳು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
 
ತೆಂಕ ಎರ್ಮಾಳಿನ ಬೋರ್ಡ್ ಶಾಲಾ ಮೈದಾನದಲ್ಲಿ ಈ  ಪಂದ್ಯಕೂಟ ನಡೆಯಲಿದ್ದು, ದ.ಕ, ಉಡುಪಿ ಜಿಲ್ಲೆಯ ೧೫ಕ್ಕೂ ಹೆಚ್ಚು ಬಲಿಷ್ಠ ತಂಡಗಳು ಭಾಗವಹಿಸಲಿದೆ. ಎಸ್‌ಎನ್‌ಜಿ ಟ್ರೋಫಿ-೨೦೦೯ ವಿಜೇತರಿಗೆ ನೀಡಲಾಗುವುದು.
 
ಪಂದ್ಯಾಕೂಟವನ್ನು ಶಾಸಕ ಲಾಲಾಜಿ ಮೆಂಡನ್ ಉದ್ಘಾಟಿಸಲಿದ್ದಾರೆ. ರಾಜ್ಯ ಬಂದರು-ಪರಿಸರ ಖಾತೆ ಸಚಿವ ಕೃಷ್ಣ ಜೆ.ಪಾಲೆಮಾರ್ ಸಾಧಕರನ್ನು ಸನ್ಮಾನಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಸಂಸದ ಡಿ.ವಿ.ಸದಾನಂದ ಗೌಡ ಬಹುಮಾನ ವಿತರಿಸಲಿದ್ದು, ಮಾಜಿ ಸಚಿವ ವಸಂತ ವಿ.ಸಾಲ್ಯಾನ್ ಅಧ್ಯಕ್ಷತೆ ವಹಿಸಲಿದ್ದಾರೆ.
 
ಸುದ್ದಿಗೋಷ್ಠಿಯಲ್ಲಿ ಕ್ಲಬ್‌ನ ಅಧ್ಯಕ್ಷ ಪ್ರಶಾಂತ್ ಕುಮಾರ್, ಕಾರ್ಯದರ್ಶಿ ರವಿಪ್ರಕಾಶ್, ಕೋಶಾಧಿಕಾರಿ ಪ್ರದೀಪ್ ಪೂಜಾರಿ, ಜೊತೆ ಕಾರ್ಯದರ್ಶಿ ವಿನಿತ್ ಕುಮಾರ್ ನವರಂಗ್ ವೆಜ್‌ನಲ್ಲಿ ನಡೆದ ಸುದಿಗೋಷ್ಠಿಯಲ್ಲಿ ಹಾಜರಿದ್ದರು.

ವರದಿ: ಹಮೀದ್, ಪಡುಬಿದ್ರಿ.

Share: