ಕಾರವಾರ : ಆತ್ಮಹತ್ಯೆಗೆ ಯತ್ನಿಸಿದ ಯುವಕನೋರ್ವನನ್ನ ರಕ್ಷಿಸಿದ ಘಟನೆ ಕಾರವಾರದ ರವೀಂದ್ರನಾಥ ಕಡಲತೀರದಲ್ಲಿ ನಡೆದಿದೆ.
ಪಶ್ಚಿಮ ಬಂಗಾಳ ಮೂಲದ ಮುಪ್ಲಾ ಮಂಡಲ್ ರಕ್ಷಣೆಗೊಳಗಾದವನು. ತಾನು ಪ್ರೀತಿಸಿದ ಹುಡುಗಿ ಬೇರೆಯವನೊಂದಿಗೆ ಮದುವೆಯಾಗಿದ್ದಕ್ಕೆ ಮನನೊಂದು ಶುಕ್ರವಾರ ಕಡಲತೀರದಲ್ಲಿ ಸಮುದ್ರಕ್ಕೆ ಧುಮುಕಿ ಆತ್ಮಹತ್ಯೆಗೆ ಯತ್ನಿಸಿದ್ದ.
ಅಲ್ಲಿಯೇ ಕರ್ತವ್ಯದಲ್ಲಿದ್ದ ಲೈಪ್ ಗಾರ್ಡ್ ಮತ್ತು ಪ್ರವಾಸಿ ಮಿತ್ರ ಸಿಬ್ಬಂದಿಗಳು ಸಮುದ್ರಕ್ಕೆ ಧುಮುಕಿ ಯುವಕನನ್ನ ರಕ್ಷಿಸಿದ್ದಾರೆ.. ಅಲ್ಲದೇ ಬುದ್ದಿವಾದ ಹೇಳಿ ಕಳಿಸಿದ್ದಾರೆ. ಕಾರವಾರ ನಗರಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.