ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಧಾರವಾಡದಲ್ಲಿ ಸೈನ್ಯ ಭರ್ತಿ ರ‍್ಯಾಲಿ

ಧಾರವಾಡದಲ್ಲಿ ಸೈನ್ಯ ಭರ್ತಿ ರ‍್ಯಾಲಿ

Thu, 29 Apr 2010 13:38:00  Office Staff   S.O. News Service
ಧಾರವಾಡದಲ್ಲಿ ಸೈನ್ಯ ಭರ್ತಿ ರ‍್ಯಾಲಿ

ಬೆಳಗಾವಿ:ಏಪ್ರಿಲ್:೨೯, ಬೆಂಗಳೂರ ಹೆಡ್‌ಕ್ವಾರ್ಟರ್ಸ್ ರಿಕ್ರೂಟಿಂಗ್ ಝೋನ್ ಹಾಗೂ ಬೆಳಗಾವಿ ಆರ್ಮಿ ರಿಕ್ರೂಟಿಂಗ್ ಆಫೀಸ್ ಇವರವತಿಯಿಂದ ಬರುವ ಮೇ ೨೮ ರಿಂದ ಜೂನ್ ೨ ರವರೆಗೆ ಬೆಳಿಗ್ಗೆ ೫ ರಿಂದ ಉತ್ತರ ಕರ್ನಾಟಕ ರಾಜ್ಯದ ಪುರುಷ ಅಭ್ಯರ್ಥಿಗಳಿಗೆ ಸೈನ್ಯ ಭರ್ತಿ ರ‍್ಯಾಲಿಯನ್ನು ಧಾರವಾಡದ ಕೃಷಿ ವಿಜ್ಞಾನ ವಿದ್ಯಾಲಯದ ಮೈದಾನದಲ್ಲಿ ಆಯೋಜಿಸಲಾಗಿದೆ. 

     ಸೋಲ್ಜರ್ ಜನರಲ್ ಡ್ಯೂಟಿ, ಸೋಲ್ಜರ್ ಕ್ಲರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್, ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ನರ್ಸಿಂಗ್ ಅಸಿಸ್ಟಂಟ್, ಸೋಲ್ಜರ್ ಟ್ರೇಡ್‌ಮನ್ (ಸ್ಟಿವಾರ್ಡ, ಚೆಫ್, ಡ್ರೆಸರ್, ವಾಶರ್‌ಮ್ಯಾನ್, ಹೌಸ್‌ಕೀಪರ್, ಮೇಸ್ ಕೀಪರ್, ಸಪೊರ್ಟ ಸ್ಟಾಫ್ (ಇ.ಆರ್) ಮತ್ತು ಟೇಬಲ್) ಹಾಗೂ ಡಿ.ಎಸ್.ಸಿ ಹುದ್ದೆಗಳಿಗೆ ಭರ್ತಿ ರ‍್ಯಾಲಿ ನಡೆಯಲಿದೆ. 

      ಮೇ ೨೮ ರಿಂದ ೩೦ ರವರೆಗೆ ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ಭರ್ತಿ ನಡೆಯಲಿದ್ದು, ಮೇ ೨೮ ರಂದು ಧಾರವಾಡ, ಗದಗ, ಬಳ್ಳಾರಿ ಮತ್ತು ಹಾವೇರಿ ಜಿಲ್ಲೆ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ. ಅದರಂತೆ ಮೇ ೨೯ ರಂದು ಬೆಳಗಾವಿ ಬೀದರ ಮತ್ತು ಗುಲಬರ್ಗಾ ಅಭ್ಯರ್ಥಿಗಳು ಹಾಗೂ ಮೇ ೩೦ ರಂದು ಬಾಗಲಕೋಟ, ಬಿಜಾಪೂರ, ಕೊಪ್ಪಳ ಮತ್ತು ರಾಯಚೂಯ ಜಿಲ್ಲೆಯ ಅಭ್ಯರ್ಥಿಗಳು ಭರ್ತಿಯಲ್ಲಿ ಭಾಗವಹಿಸಬೇಕು. 

     ಈ ಸೋಲ್ಜರ್ ಜನರಲ್ ಡ್ಯೂಟಿ ಹುದ್ದೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. ೪೫ ಅಂಕದೊಂದಿಗೆ ಪಾಸಾಗಿರಬೇಕು. . ಹಾಗೂ ಸೋಲ್ಜರ್ ಜಿ.ಡಿಗೆ. ಪ್ರತಿ ವಿಷಯದಲ್ಲಿ ಶೇ. ೩೨ ಅಂಕ ಪಡೆದಿರಬೇಕು. ಉನ್ನತ ಶಿಕ್ಷಣ ಪಡೆದವರಿಗೆ ಅಂಕಗಳ ಮಿತಿ ಪರಿಗಣಿಸಲಾಗದು. ವಯೋಮಿತಿ ೧೭ಳಿ ರಿಂದ ೨೧ ವರ್ಷರೊಳಗಿರಬೇಕು. ೧೬೬ ಸೆಂ.ಮೀ. ಎತ್ತರ, ೫೦ ಕೆ.ಜಿ. ತೂಕ ಹಾಗೂ ೭೭/೮೨ ಸೆಂ.ಮೀ. ಎದೆ ಸುತ್ತಳತೆ ಹೊಂದಿರಬೇಕು.  
      ಮೇ ೩೧ ರಂದು ಸೋಲ್ಜರ್ ಕ್ಲಾರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್ ಹಾಗೂ ಸೋಲ್ಜರ್ ಟೆಕ್ನಿಕಲ್, ಸೋಲ್ಜರ್ ನರ್ಸಿಂಗ್ ಅಸಿಸ್ಟಂಟ್ ಹುದ್ದೆಗೆ ಭರ್ತಿ ನಡೆಯಲಿದ್ದು, ಬಾಗಲಕೋಟ, ಬೆಳಗಾವಿ, ಬಳ್ಳಾರಿ, ಬೀದರ, ವಿಜಾಪೂರ, ಧಾರವಾಡ, ಗದಗ, ಗುಲಬರ್ಗಾ, ಹಾವೇರಿ, ಕೊಪ್ಪಳ ಮತ್ತು ರಾಯಚೂರ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬೇಕು. 
       ಸೋಲ್ಜರ್ ಕ್ಲಾರ್ಕ್/ಸ್ಟೋರ್ ಕೀಪರ್ ಟೆಕ್ನಿಕಲ್ ಹುದ್ದೆಗೆ ೧೭ ಳಿ ರಿಂದ ೨೩ ವರ್ಷ ವಯೋಮಿತಿ ಹೊಂದಿರಬೇಕು. ದ್ವಿತೀಯ ಪಿ.ಯು.ಸಿ/ಇಂಟರ್ ಮಿಡಿಯಟ್‌ದಲ್ಲಿ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ಯಾವುದೇ ಒಂದಲ್ಲಿ ಪ್ರತಿ ವಿಷಯಕ್ಕೆ ಸರಾಸರಿ ಕನಿಷ್ಠ ಶೇ. ೫೦ ರಷ್ಟು ಅಂಕ ಪಡೆದು ಪಾಸಾಗಿರಬೇಕು. ೧೦ನೇ ತರಗತಿ/ ಎಸ್.ಎಸ್.ಎಲ್.ಸಿ.ಯಲ್ಲಿ ಗಣಿತ, ಇಂಗ್ಲೀಷ ಮತ್ತು ಅಕೌಂಟ್ಸ್ ಅಥವಾ ಬುಕ್ ಕೀಪಿಂಗ್‌ನಲ್ಲಿ ಅಭ್ಯಸಿಸಿ ಶೇ. ೪೦ ರಷ್ಟು ಅಂಕ ಪಡೆದವರಿಗೆ ಉನ್ನತ ಶಿಕ್ಷಣ ಅರ್ಹತೆ ಶೇಕಡಾವಾರು ಅಂಕಗಳ ಸಡಿಲಿಕೆ ಇದೆ. ೧೬೨ ಸೆಂ.ಮೀ. ಎತ್ತರ, ೫೦ ಕೆ.ಜಿ. ತೂಕ ಹಾಗೂ ೭೭/೮೨ ಸೆಂ.ಮೀ. ಎದೆ ಸುತ್ತಳತೆ ಹೊಂದಿರಬೇಕು.  
          ಸೋಲ್ಜರ್ ಟೆಕ್ನಿಕಲ್ ಹುದ್ದೆಗೆ ೧೭ ಳಿ ರಿಂದ ೨೩ ವರ್ಷ ವಯೋಮಿತಿ ಹೊಂದಿರಬೇಕು. ದ್ವಿತೀಯ ಪಿ.ಯು.ಸಿ.ಯಲ್ಲಿ ವಿಜ್ಞಾನ-ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಇಂಗ್ಲೀಷ ವಿಷಯ ಪಡೆದು ಪಾಸಾಗಿರಬೇಕು. ಸೋಲ್ಜರ್ ನರ್ಸಿಂಗ್ ಅಸಿಸ್ಟಂಟ್ ಹುದ್ದೆಗೆ ೧೭ ಳಿ ರಿಂದ ೨೩ ವರ್ಷ ವಯೋಮಿತಿ ಹೊಂದಿರಬೇಕು. ದ್ವಿತೀಯ ಪಿ.ಯು.ಸಿ. ವಿಜ್ಞಾನ-ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ಇಂಗ್ಲೀಷ ವಿಷಯದಲ್ಲಿ ಪ್ರತಿ ವಿಷಯಕ್ಕೆ ಕನಿಷ್ಠ ಶೇ. ೪೦ ರಷ್ಟು ಅಂಕ ಪಡೆದು ಸರಾಸರಿ ಶೇ. ೫೦ ಅಂಕ ಪಡೆದು ಪಾಸಾಗಿರಬೇಕು. ಅಥವಾ ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಜೀವಶಾಸ್ತ್ರ ವಿಜ್ಞಾನ ಹಾಗೂ ಇಂಗ್ಲೀಷಗಳಲ್ಲಿ ಬಿ.ಎಸ್.ಸಿ. ಪಾಸಾಗಿರಬೇಕು. ೧೬೫ ಸೆಂ.ಮೀ. ಎತ್ತರ, ೫೦ ಕೆ.ಜಿ. ತೂಕ ಹಾಗೂ ೭೭/೮೨ ಸೆಂ.ಮೀ. ಎದೆ ಸುತ್ತಳತೆ ಹೊಂದಿರಬೇಕು.   
       ಜೂನ್ ೧ ರಂದು ಸೋಲ್ಜರ್ ಟ್ರೇಡ್‌ಮನ್ (ಸ್ಟಿವಾರ್ಡ, ಚೆಫ್, ಡ್ರೆಸರ್, ವಾಶರ್‌ಮ್ಯಾನ್, ಹೌಸ್‌ಕೀಪರ್, ಮೇಸ್ ಕೀಪರ್, ಸಪೊರ್ಟ ಸ್ಟಾಫ್ (ಇ.ಆರ್) ಮತ್ತು ಟೇಬಲ್) ಹುದ್ದೆಗೆ ಭರ್ತಿ ನಡೆಯಲಿದ್ದು, ಬಾಗಲಕೋಟ, ಬೆಳಗಾವಿ, ಬಳ್ಳಾರಿ, ಬೀದರ, ವಿಜಾಪೂರ, ಧಾರವಾಡ, ಗದಗ, ಗುಲಬರ್ಗಾ, ಹಾವೇರಿ, ಕೊಪ್ಪಳ ಮತ್ತು ರಾಯಚೂರ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬೇಕು.  ೧೭ ಳಿ ರಿಂದ ೨೩ ವರ್ಷ ವಯೋಮಿತಿ ಹೊಂದಿರಬೇಕು. ೧೦ ನೇ ತರಗತಿಯಲ್ಲಿ ಪಾಸಾಗಿರಬೇಕು. ೧೬೬ ಸೆಂ.ಮೀ. ಎತ್ತರ, ೫೦ ಕೆ.ಜಿ. ತೂಕ ಹಾಗೂ ೭೭/೮೧ ಸೆಂ.ಮೀ. ಎದೆ ಸುತ್ತಳತೆ ಹೊಂದಿರಬೇಕು.  
     ಜೂನ್ ೨ ರಂದು ಎಲ್ಲ ಹುದ್ದೆಗೆ ಕಡ್ಡಾಯವಾಗಿ ಮಾಜಿ ಸೈನಿಕರ ಮಕ್ಕಳು, ಸೇವೆಯಲ್ಲಿದ್ದ ಸೈನಿಕರ ಮಕ್ಕಳು, ಯುದ್ಧದಲ್ಲಿ ಮಡಿದ ಸೈನಿಕರ ಮಕ್ಕಳು, ಎನ್.ಸಿ.ಸಿ ಎ/ಬಿ/ಸಿ ಸರ್ಟಿಫೀಕೇಟ್ ಹೊಂದಿದ ಮಕ್ಕಳು ಹಾಗೂ ರಾಷ್ಟ್ರ/ ರಾಜ್ಯ ಮಟ್ಟದ ಆಟದ ಪಟು ಕಳೆದ ಎರಡು ವರ್ಷಗಳಲ್ಲಿ ಮೊದಲು ಅಥವಾ ಎರಡನೇ ಸ್ಥಾನಗಳಿಸಿದ ರಾಯಚೂರ, ಬೀದರ, ಗುಲಬರ್ಗಾ, ವಿಜಾಪೂರ, ಬೆಳಗಾವಿ, ಹಾವೇರಿ, ಧಾರವಾಡ, ಬಳ್ಳಾರಿ, ಗದಗ, ಬಾಗಲಕೋಟ ಮತ್ತು ಕೊಪ್ಪಳ ಜಿಲ್ಲೆಯ ಅಭ್ಯರ್ಥಿಗಳು ಭಾಗವಹಿಸಬೇಕು. 
        ಅಂದು ಡಿ.ಎಸ್.ಸಿ. ಹುದ್ದೆಗೆ ಭರ್ತಿ ನಡೆಯಲಿದ್ದು, ಬಾಗಲಕೋಟ, ಬೆಳಗಾವಿ, ಬಳ್ಳಾರಿ, ಬೀದರ, ಬಿಜಾಪೂರ, ಧಾರವಾಡ, ಗದಗ, ಗುಲಬರ್ಗಾ, ಹಾವೇರಿ, ಕೊಪ್ಪಳ ಮತ್ತು ರಾಯಚೂರ ಜಿಲ್ಲೆಗಳ ೪೫ ವರ್ಷಗಳ ಒಳಗಿನ ಅಭ್ಯರ್ಥಿಗಳು ಭಾಗವಹಿಸಬೇಕು. ಇದಕ್ಕಾಗಿ ಅಭ್ಯರ್ಥಿಗಳು ಕನಿಷ್ಠ ೫ ವರ್ಷ ಸೈನ್ಯದಲ್ಲಿ ಸೇವೆ ಸಲ್ಲಿಸಿರಬೇಕು. ಅತ್ಯುತ್ತಮ ನಡತೆ ಪತ್ರ ಇರಬೇಕು. ಸೇನಾ ೩ನೇ ಕ್ಲಾಸ್ ಶಿಕ್ಷಾ ಪ್ರಮಾಣ ಪತ್ರ ಅಥವಾ ಮ್ಯಾಟ್ರಿಕ್ಯುಲೇಶನ್ ಇರಬೇಕು. ದೈಹಿಕ ಪರೀಕ್ಷೆ ನಂತರ ಕೇವಲ ೫ ವರ್ಷದೊಳಗೆ ನಿವೃತ್ತಿ ಹಾಗೂ ಬಿಡುಗಡೆ ಹೊಂದಿರಬೇಕು. ಸೇಫ್-೧ ವೈದ್ಯಕೀಯ ಫಿಟ್‌ನೇಸ್ ಇರಬೇಕು. ಸೇವಾ ಕಾಯಿದೆ ೧೩(೩) ರ ೩ನೇ ವಿಧಿ ಪ್ರಕಾರ ಸೇನೆಯಿಂದ ವಜಾ ಆಗಿರಬಾರದು. ಕಳೆದ ಐದು ವರ್ಷಗಳ ಸೇವೆಯಲ್ಲಿ ಒಂದೆ ಒಂದು ಕೆಂಪು ಮಷಿಯ ರಿಮಾರ್ಕ್ ಇರಬಾರದು, ಹಾಗೂ ತಮ್ಮ ಸೇವಾವಧಿ ಯಲ್ಲಿ ೨ ಕ್ಕಿಂತ ಹೆಚ್ಚು ಕೆಂಪು ಮಾರ್ಕ ಹೊಂದಿರಬಾರದು.  
      ಅಭ್ಯರ್ಥಿಗಳಿಗೆ ೧.೬ ಕಿ.ಮೀ. ಓಟ, ಪುಲ್ ಆಪ್ಸ್, ಬ್ಯಾಲನ್ಸ್ ಜಿಗ್ ಜಾಗ್ ನಡಿಗೆ, ೯ ಅಡಿ ತಗ್ಗು ಜಿಗಿತ ದೈಹಿಕ ಪರೀಕ್ಷೆ ನಡೆಯಲಿದೆ. ಲಿಖಿತ ಪರೀಕ್ಷೆ ದಿನಾಂಕವನ್ನು ರ‍್ಯಾಲಿ ಸ್ಥಳದಲ್ಲಿ ಘೋಷಿಸಲಾಗುತ್ತದೆ. 
ಪಿ.ಯು.ಸಿ, ಇಂಟರ್‌ಮೆಡಿಯಟ್, ಮತ್ತು ಹೈಯರ್ ಇಜ್ಯುಕೇಶನ್ ಮೂಲ ಸರ್ಟಿಫಿಕೇಟ್ ಹಾಗೂ ಶಿಕ್ಷಣ ಪಡೆದ ಎಲ್ಲವೂಗಳ ಪ್ರತಿಯ ಜೊತೆಗೆ ಎರಡು ಝೆರಾಕ್ಸ್ ಪ್ರತಿಗಳನ್ನು ದೃಢೀಕರಿಸಿ ತರಬೇಕು. ಇತ್ತೀಚಿನ ಪಾಸಪೋರ್ಟ ಅಳತೆಯ ಬಣ್ಣದ ೧೨ ಭಾವಚಿತ್ರಗಳು, ರಹವಾಸಿ/ವಲಸೆಬಂದ/ಶಾಶ್ವತ ರಹವಾಸಿ ಮೂಲ ಪ್ರಮಾಣ ಪತ್ರ ಹಾಗೂ  ನಡತೆ ಪ್ರಮಾಣ ಪತ್ರದ ಮೂಲ ಪ್ರತಿ ತರಬೇಕು.  
ಹಾಲಿ ಸೈನಿಕರ, ಮಾಜಿ ಸೈನಿಕರ, ಯುದ್ಧದಲ್ಲಿ ಮಡಿದ ಸೈನಿಕರ ಮಕ್ಕಳಾಗಿದ್ದಲ್ಲಿ ಯುದ್ಧದ ವಿಧವಾ ಹೆಸರು  ಭಾಗ-II ಮತ್ತು ಜನ್ಮ ದಿನಾಂಕ ಹೊಂದಿರುವ ಡಿಸ್ಚಾರ್ಜ ಪುಸ್ತಕ/ ಸರ್ವಿಸ್ ಸರ್ಟಿಫಿಕೇಟ್‌ದ ಮೂಲ ಪ್ರತಿಯ ಜೊತೆಗೆ ಪೂರ್ಣ ಹೆಸರು ಹಾಗೂ ವಿಳಾಸದೊಂದಿಗೆ ತಮ್ಮ ರಿಕಾರ್ಡ ಆಫೀಸ್ ಅಧಿಕಾರಿಗಳಿಂದ ಮಾತ್ರ ವೇರಿಫಾಯಿಡ್ ಮಾಡಿಸಬೇಕು. ಬೇರೆ ಯಾವುದೇ ಪ್ರಾಧಿಕಾರಿಗಳಿಂದ ನೀಡಲಾದ ಪ್ರಮಾಣ ಪತ್ರ ಅಂಗೀಕರಿಸಲಾಗುವುದಿಲ್ಲ. ಎನ್.ಸಿ.ಸಿ. ಅಭ್ಯರ್ಥಿಗಳಿದ್ದಲ್ಲಿ ಎನ್.ಸಿ.ಸಿ./ ಎ/ಬಿ/ಸಿ ಸರ್ಟಿಫಿಕೇಟ್‌ದ ಮೂಲಪ್ರತಿ ತರಬೇಕು. ಹೆಚ್ಚಿನ ಮಾಹಿತಿಯನ್ನು ಆರ್ಮಿ ರಿಕ್ರೂಟಿಂಗ್ ಆಫೀಸ್, ಫೋರ್ಟ ಬೆಳಗಾವಿ-೫೯೦೦೧೬ ಇವರನ್ನು (ದೂರವಾಣಿ ಸಂಖ್ಯೆ: ೦೮೩೧-೨೪೬೫೫೫೦) ಸಂಪರ್ಕಿಸಿ ಪಡೆಯಬಹುದಾಗಿದೆ. 


Share: