ಭಟ್ಕಳ : ಭಟ್ಕಳದ ಅಂಜುಮನ್ ಪದವಿ ಪೂರ್ವ ಪುರುಷರ ಕಾಲೇಜು ಪಿಯು ಪರೀಕ್ಷೆಯಲ್ಲಿ ಶೇ.82.58 ಅಂಕ ಗಳಿಸಿದೆ.
ಕಾಲೇಜಿನಲ್ಲಿ 187 ವಿದ್ಯಾರ್ಥಿಗಳು ಪರೀಕ್ಷೆ ಬರೆದು ಒಟ್ಟು 155 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಕಾಲೇಜಿನ ವಾಣಿಜ್ಯ ವಿಭಾಗ ಶೇ.87.25 ಫಲಿತಾಂಶ ಪಡೆದಿದ್ದರೆ, ವಿಜ್ಞಾನ ವಿಭಾಗ ಶೇ.76.31 ಹಾಗೂ ಕಲಾ ವಿಭಾಗ ಶೇ.88.88 ಫಲಿತಾಂಶ ಪಡೆದಿವೆ.
ವಾಣಿಜ್ಯ ವಿಭಾಗ : ಮೊಹಮ್ಮದ್ ಹಿಶಾಮ್ ಕಾಜಿಯಾ ಮೊಹಮ್ಮದ್ ಕಾಜಿಯಾ 94.33ಶೇ. ಅಂಕಗಳನ್ನು ಪಡೆದು ಕಾಲೇಜಿನಲ್ಲಿ ಅಗ್ರಸ್ಥಾನದಲ್ಲಿದ್ದರೆ, ಅಹ್ಮದ್ ಸಲೀಫ್ ಫಕರಾಡೆ ಸಜ್ಜದ್ ಅನ್ವರ್ ಫಕರ್ಡೆ 92.5 ಶೇ ಮತ್ತು ಮೊಹಮ್ಮದ್ ನಫಾಫ್ ಮಣಿಗಾರ್ ನೂರ್ ಮೊಹಮ್ಮದ್ ಮಣೇಗಾರ್ 90.16ಶೇ ಅಂಕ ಗಳಿಸಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.
ಕಲಾ ವಿಭಾಗ : ಅರ್ಬಾಜ್ ಖಾನ್ ಲಿಯಾಕತ್ ಅಲಿ ಖಾನ್ ಶೇ.74.8, ಮಹೇಶ್ ಮಂಜುನಾಥ್ ನಾಯ್ಕ ಶೇ. 74.66 ಮತ್ತು ಹಸನೈನ್ ದಾದಾಪೀರ್ ಹೊಂಬಾಳಿ 74.33 ಶೇ ಅಂಕ ಗಳಿಸಿ ಕಾಲೇಜಿನ ಕಲಾ ವಿಭಾಗದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಅದೇ ರೀತಿ ವಾಣಿಜ್ಯ ವಿಭಾಗದಲ್ಲಿ ಮೊಹಮ್ಮದ್ ಝಯಾನ್ ಮತ್ತು ಜಾಫರ್ ಅಲಿ ಕಾಶಿಂಜಿ ಶೇ. 91.16, ಜುರೈಫ್ ಅಹ್ಮದ್ ಮೊಹಮ್ಮದ್ ಜಮ್ಮದ್ ರುಕ್ನುದ್ದೀನ್ ಶೇ. 90.66 ಮತ್ತು ಅಬ್ದುರ್ ರೆಹಮಾನ್ ಮೊಹಮ್ಮದ್ ಜಸೀಮ್ ರುಕ್ನುದ್ದೀನ್ ಶೇ. 90 ರಷ್ಟು ಅಂಕ ಗಳಿಸಿ ಕ್ರಮವಾಗಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಅಂಜುಮನ್ ಸಂಸ್ಥೆ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.