ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಪಾರ್ಲೆಜಿ ಬಿಸ್ಕೆಟ್ ತುಂಬಿದ ಲಾರಿಯಲ್ಲಿ ಅಕ್ರಮ ಮದ್ಯ.

ಪಾರ್ಲೆಜಿ ಬಿಸ್ಕೆಟ್ ತುಂಬಿದ ಲಾರಿಯಲ್ಲಿ ಅಕ್ರಮ ಮದ್ಯ.

Sat, 24 Jun 2023 02:07:43  Office Staff   SO News

ಜೊಯಿಡಾ : ಪಾರ್ಲೆಜಿ ಬಿಸ್ಕೆಟ್ ಸಾಗಿಸುವ ಲಾರಿಯಲ್ಲಿ ಅಕ್ರಮವಾಗಿ ಮದ್ಯ ಸಾಗಿಸುವ ವೇಳೆ ಪೊಲೀಸರು ದಾಳಿಸಿದ ಘಟನೆ ಜೋಯಿಡಾದ ರಾಮನಗರದಲ್ಲಿ ನಡೆದಿದೆ

ಟಿಎಸ್ 05 ಜಿಇ 8845 ನೊಂದಣಿಯ ಲಾರಿಯಲ್ಲಿ ಸುಮಾರು 32ಲಕ್ಷ ಆರು ಸಾವಿರ ನಾಲ್ಕುನೂರು ರೂಪಾಯಿ ಮೌಲ್ಯದ ಮದ್ಯ ಸಾಗಿಸಲಾಗುತಿತ್ತು.

ಜೋಯಿಡಾ ಸಿಪಿಐ ನಿತ್ಯಾನಂದ ಪಂಡಿತ ನೇತೃತ್ವದಲ್ಲಿ ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ರಾಮನಗರದಲ್ಲಿ ಲಾರಿ ತಡೆದಿದ್ದಾರೆ. ಪರಿಶೀಲನೆ ನಡೆಸಿದಾಗ ಅಕ್ರಮ ಮದ್ಯ ಇರೋದು ಬೆಳಕಿಗೆ ಬಂದಿದೆ.

ಒಟ್ಟು ಎರಡು ಲಕ್ಷ ರೂಪಾಯಿ ಪಾರ್ಲೆಜಿ ಬಿಸ್ಕೇಟ್ 750  ಎಂಎಲ್ ನ ಹತ್ತು ಬಾಕ್ಸ್ ರಾಯಲ್ ಸ್ಟ್ಯಾಗ್ ವಿಸ್ಕಿ, 750 ಎಂಎಲ್ ನ 130 ಬಾಕ್ಸ್ ಪ್ರೆಂಚ್ ಬ್ರಾಂಡಿ ಬಾಟಲ್ ಪತ್ತೆಯಾಗಿದೆ.

ಘಟನೆಯಲ್ಲಿ  ಲಾರಿಯ ಅಂದಾಜು ಮೊತ್ತ 20 ಲಕ್ಷ  ಅಂದಾಜಿಸಲಾಗಿದ್ದು ಜಪ್ತಿ ಮಾಡಲಾಗಿದ್ದು ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share: