ಕಾರವಾರ : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು 2023-24 ನೇ ಸಾಲಿನ ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಕ್ಕೆ ಪರಿಶಿಷ್ಟ ಪಂಗಡದ ಕ್ರೀಡಾಪಟುಗಳ ಆಯ್ಕೆಯ ಪ್ರಕ್ರಿಯೆಯನ್ನು ಮೇ.29 ರಂದು ಯಲ್ಲಾಪುರ ತಾಲೂಕು ಕ್ರೀಡಾಂಗಣ ಮತ್ತು ಮೇ 30 ರಂದು ಹಳಿಯಾಳ ತಾಲೂಕು ಕ್ರೀಡಾಂಗನದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಸಕ್ತ ಅಭ್ಯರ್ಥಿಗಳು 7 ಮತ್ತು 8 ನೇ ತರಗತಿಗೆ ಅರ್ಹತೆ ಪಡೆದಿರಬೇಕು. 2023 ಕ್ಕೆ ಅಭ್ಯರ್ಥಿಯ ವಯೋಮಾನ 14 ವರ್ಷ ಮೀರಿರಬಾರದು, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ, ಭಾಗವಹಿಸುವ ಬಾಲಕ/ಬಾಲಕಿಯರು ಜನನ ಪ್ರಮಾನ ಪತ್ರ, ವ್ಯಾಸಂಗ ಪ್ರಮಾಣ ಪತ್ರ,ಆಧಾರ ಕಾರ್ಡ್, ಜಾತಿ ಪ್ರಮಾಣ ಪತ್ರ, ಪಾಸಪೋರ್ಟ ಸೈಜ್ ಫೋಟಗಳನ್ನು ಕಡ್ಡಾಯವಾಗಿ ತರತಕ್ಕದ್ದು, ಅಥ್ಲೆಟಿಕ್ಸ್ ಹಾಗೂ ಬಾಕ್ಸಿಂಗ್ ಕ್ರೀಡೆಗಳಲ್ಲಿ ಆಯ್ಕೆಯಾದ ಕ್ರೀಡಾಪಟುಗಳಿಗೆ ಕ್ರೀಡಾ ವಸತಿ ನಿಲಯ ಬೆಂಗಳೂರು ಹಾಗೂ ಕುಸ್ತಿ ಕ್ರೀಡೆಗೆ ಆಯ್ಕೆಯಾದ ಕ್ರೀಡಾಪಟುಗಳಿಗೆ ಹಳಿಯಾಳ ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯದಲ್ಲಿ ಪ್ರವೇಶ ಕಲಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9945489193, 7019565606 ಗೆ ಸಂಪರ್ಕಿಸಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.