ಕುಂದಾಪುರ, ಮೇ ೨: ಇಲ್ಲಿಂದ ಹರ್ಕೂರಿಗೆ ರಿಕ್ಷಾದಲ್ಲಿ ಪ್ರಯಾಣಿಸುತ್ತಿರುವಾಗ ರಿಕ್ಷಾವು ಚಾಲಕನ ನಿಯಂತ್ರಣ ಕಳೆದುಕೊಂಡು ವಿದ್ಯುತ್ ಕಂಬಕ್ಕೆ ಗುದ್ದಿದಾಗ ಚಾಲಕ ರಾಜು ಪೂಜಾರಿ ಎಂಬವರು ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಕಟ್ಟಿನಮಕ್ಕಿ ಎಂಬಲ್ಲಿ ರಿಕ್ಷಾವು ಕಂಬಕ್ಕೆ ಗುದ್ದಿತೆನ್ನಲಾಗಿದೆ. ಗಾಯಾಳುವನ್ನು ತಕ್ಷಣ ಕುಂದಾಪುರಕ್ಕೆ ತಂದು ಸ್ಥಳೀಯ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಮಣಿಪಾಲ ಆಸ್ಪತ್ರೆಗೆ ಕರೆತರುತ್ತಿರುವಾಗ ಮೃತಪಟ್ಟಿದ್ದಾರೆ ಎಂದು ಅದೇ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಸುಧಾಕರ ಶೆಟ್ಟಿ ಎಂಬವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.