ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನೂಪುರ್ ಶರ್ಮಾ, ನವೀನ್ ಜಿಂದಾಲ್ ಬಂಧನಕ್ಕೆ ಭಟ್ಕಳ ತಂಝೀಮ್ ಆಗ್ರಹ: ಜಿಲ್ಲಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ

ನೂಪುರ್ ಶರ್ಮಾ, ನವೀನ್ ಜಿಂದಾಲ್ ಬಂಧನಕ್ಕೆ ಭಟ್ಕಳ ತಂಝೀಮ್ ಆಗ್ರಹ: ಜಿಲ್ಲಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ

Sun, 19 Jun 2022 02:42:53  Office Staff   SO News

ಭಟ್ಕಳ : ಪ್ರವಾದಿ ಮಹಮ್ಮದ್ ಪೈಗಂಬರ್ ಅವರನ್ನು ನಿಂದಿಸಿರುವ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್‌ರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ  ಭಟ್ಕಳದ ಸಮಾಜ ಸೇವಾ ಸಂಘಟನೆ ಮಜ್ಲಿಸ್-ಎ-ಇಸ್ಲಾ-ಒ-ತಂಝೀಮ್ ಸರ್ಕಾರವನ್ನು ಒತ್ತಾಯಿಸಿದೆ.  ಇದೇ ವೇಳೆ   ಭಟ್ಕಳ ಮಾತ್ರವಲ್ಲದೆ ಜಿಲ್ಲಾ ಮಟ್ಟದಲ್ಲೂ ಬೃಹತ್ ಪ್ರತಿಭಟನೆ ನಡೆಸುವ  ಎಚ್ಚರಿಕೆ ನೀಡಿದೆ. 

ಈ ಸಂಬಂಧ   ಭಟ್ಕಳ ಸಹಾಯಕ ಆಯುಕ್ತೆ ಮಮತಾದೇವಿ ಅವರ ಮೂಲಕ  ರಾಷ್ಟ್ರಪತಿಯವರಿಗೆ ಮನವಿ  ಸಲ್ಲಿಸಿದ್ದಾರೆ. 

ಈ ವೇಳೆ  ಮಾತನಾಡಿದ ಸಂಘಟನೆಯ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಮುಹಮ್ಮದ್ ಹನೀಫ್ ಶಬಾಬ್, ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್‌ ಅವರು ಪ್ರವಾದಿ ಮಹಮ್ಮದ್ ಅವರನ್ನು ಅವಮಾನಿಸಲು ಯತ್ನಿಸಿದ ರೀತಿ ಎಲ್ಲಾ ಮುಸ್ಲಿಮರ ಭಾವನೆಗಳನ್ನು ಕೆರಳಿಸಿದೆ. ಇದನ್ನು ಕಂಡ ಇಡೀ ನಗರದ ಜನತೆ ಪ್ರತಿಭಟನೆ ನಡೆಸಲು  ಮುಂದಾಗಿತ್ತು. ಆದರೆ ಪರಿಸ್ಥಿತಿಯನ್ನು ಪರಿಗಣಿಸಿ ಜಿಲ್ಲಾಡಳಿತದ ಮನವಿ ಮೇರೆಗೆ ಶಾಂತರೀತಿಯಿಂದ ಇದ್ದೇವೆ ಎಂದರು.

 ಪ್ರವಾದಿ ಮಹಮ್ಮದ್ ಅವರ ಗೌರವಕ್ಕೆ ಧಕ್ಕೆ ತಂದವರನ್ನು ಕೂಡಲೇ ಬಂಧಿಸಬೇಕು ಎಂಬುದು ಭಟ್ಕಳ ಜನತೆಯ ಏಕೈಕ ಆಗ್ರಹ ಎಂದು ಹೇಳಿದರು. 

ಕಾನೂನಾತ್ಮಕವಾಗಿ ವ್ಯವಹರಿಸದಿದ್ದಲ್ಲಿ ಇಡೀ ನಗರ ಮಾತ್ರವಲ್ಲದೆ ಜಿಲ್ಲಾ ಮಟ್ಟದಲ್ಲೂ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಸಂಸ್ಥೆಯ ಮಾಜಿ ಕಾರ್ಯದರ್ಶಿ ಯಾಹ್ಯಾ ದಾಮುದಿ, ರಾಷ್ಟ್ರಪತಿಯವರಿಗೆ   ಬರೆದ ಮನವಿ ಪತ್ರ ವನ್ನು ಓದಿದರು. 

ಸಂಸ್ಥೆಯ ಮಾಜಿ ಅಧ್ಯಕ್ಷ ಮತ್ತು ಅಂಜುಮನ್ ಹಾಮಿ ಎ  ಮುಸ್ಲಿಮೀನ್ ಭಟ್ಕಳದ ಅಧ್ಯಕ್ಷ ಮುಝಮಿಲ್ ಖಾಝಿಯಾ ಮಾತನಾಡಿ,  ಕಾನೂನು ಸುವ್ಯವಸ್ಥೆ ಕಾಪಾಡುವುದಾಗಿ ಮತ್ತು ಆಡಳಿತಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ನೀಡಲು ನಾವು ಸಾರ್ವಜನಿಕ ಪ್ರತಿಭಟನೆ ನಡೆಸಿಲ್ಲ, ಇಲ್ಲದಿದ್ದರೆ ಇಡೀ ನಗರ ಇಲ್ಲಿ ಸೇರುತ್ತಿತ್ತು ಎಂದು  ಸ್ಪಷ್ಟಪಡಿಸಿದರು. 

ಇಸ್ಲಾಂ ಧರ್ಮದ ಪ್ರವಾದಿ ವಿರುದ್ಧ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್‌ ಪ್ರವಾದಿ ಮೊಹಮ್ಮದ್ ಕುರಿತಾದ ವಿವಾದಾತ್ಮಕ ಹೇಳಿಕೆ ಭಾರತ ಮಾತ್ರವಲ್ಲದೆ ಇಡೀ ಇಸ್ಲಾಂ ಪ್ರಪಂಚದ ಜನರ ಭಾವನೆಗಳಿಗೆ ನೋವುಂಟು ಮಾಡಿದೆ ಎಂದು ಅವರು ಹೇಳಿದರು. 

ತಂಝೀಮ್ ಸಂಸ್ಥೆಯ ಉಪಾಧ್ಯಕ್ಷ ಮೋತಿಶಮ್ ಮಹಮ್ಮದ್ ಜಾಫರ್ ಸಭೆಯ ನೇತೃತ್ವ ವಹಿಸಿದ್ದರು.

 ಜಮಾತುಲ್ ಮುಸ್ಲಿಮೀನ್ ಖಾಜಿ ಮೌಲಾನಾ ಅಬ್ದುಲ್ ರಬ್ಬ್ ಖತೀಬ್ ನದ್ವಿ, ಮರ್ಕಝಿ ಖಲೀಫಾ ಜಮಾತುಲ್ ಮುಸ್ಲಿಮೀನ್ ಖಾಜಿ ಮೌಲಾನಾ ಖವಾಜಾ ಮೊಯಿನುದ್ದೀನ್ ಅಕ್ರಮಿ ಮದನಿ, ತಂಜಿಎಂ ಕಾರ್ಯದರ್ಶಿ ಜಿಲಾನಿ ಶಾಬಾಂದ್ರಿ, ಭಟ್ಕಳ ಮುಸ್ಲಿಂ ಯೂಥ್ ಫೆಡರೇಶನ್ ಅಧ್ಯಕ್ಷ ಅಜೀಜ್ ಉರ್ ರೆಹಮಾನ್ ರುಖ್ನುದ್ದೀನ್ ನದ್ವಿ, ಪ್ರಧಾನ ಕಾರ್ಯದರ್ಶಿ ಉಮೀರ್ ರುಕ್ನುದ್ದೀನ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮುಹಮ್ಮದ್ ತೌಫಿಕ್ ಬ್ಯಾರಿ, ವೆಲ್ಫೇರ್ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫೈಸಲ್ ಶೇಖ್, ಅಂಜುಮನ್ ಹಮೀ ಮುಸ್ಲಿಮೀನ್ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಇಸ್ಮಾಯಿಲ್, ಭಟ್ಕಳ ಮುಸ್ಲಿಂ ಗಲ್ಫ್ ಕೌನ್ಸಿಲ್ ಮಾಜಿ ಪ್ರಧಾನ ಕಾರ್ಯದರ್ಶಿ ಎಸ್.ಜೆ.ಸೈಯದ್ ಹಾಶಿಮ್, ಫೆಡರೇಶನ್ ಮಾಜಿ ಅಧ್ಯಕ್ಷ ಇಮ್ತಿಯಾಝ್ ಉದ್ಯಾವರ್, ಅಂಜುಮನ್ ಉಪಾಧ್ಯಕ್ಷ ಮುಹಮ್ಮದ್ ಸಾದಿಕ್ ಪಿಲ್ಲುರ್,  ಜಾಮಿಯಾ ಇಸ್ಲಾಮಿಯಾ ಅಧ್ಯಕ್ಷ ಮೌಲ್ವಿ ಅಬ್ದುಲ್ ಅಲೀಂ ಖಾಸ್ಮಿ, ಪ್ರಿನ್ಸಿಪಾಲ ಮೌಲಾನಾ ಮಕ್ಬೂಲ್ ಕೊಬಟ್ಟೆ ನದ್ವಿ, ಮೌಲ್ವಿ ತಲ್ಹಾ ನದ್ವಿ, ಮೌಲ್ವಿ ಇಲ್ಯಾಸ್ ನದ್ವಿ, ಅಂಜುಮ್ ಗಂಗವಾಲಿ ನದ್ವಿ, ಮೌಲಾನಾ ಒಸಾಮಾ ನದ್ವಿ, ಮೌಲಾನಾ ಅಮೀನ್ ನದ್ವಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.


Share: