ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ಉದ್ಘಾಟಿಸಲಿ, ಪ್ರಧಾನಿ ಅಲ್ಲ: ರಾಹುಲ್

ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ಉದ್ಘಾಟಿಸಲಿ, ಪ್ರಧಾನಿ ಅಲ್ಲ: ರಾಹುಲ್

Tue, 23 May 2023 12:58:30  Office Staff   Vb

ಹೊಸದಿಲ್ಲಿ: ನೂತನ ಸಂಸತ್ ಭವನ ವನ್ನು ರಾಷ್ಟ್ರಪತಿ ಅವರು ಉದ್ಘಾಟಿಸಬೇಕು, ಪ್ರಧಾನ ಮಂತ್ರಿ ಅಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

ನೂತನವಾಗಿ ನಿರ್ಮಾಣ ಮಾಡಲಾದ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೇ 28ರಂದು ಉದ್ಘಾಟಿಸಲಿದ್ದಾರೆ.

ಲೋಕಸಭಾ ಸ್ಪೀಕರ್್ರ ಓಂ ಬಿರ್ಲಾ ಅವರು ಮೋದಿ ಅವರನ್ನು ಮೇ 18ರಂದು ಭೇಟಿಯಾಗಿದ್ದಾರೆ ಹಾಗೂ ನೂತನ ಕಟ್ಟಡ ಉದ್ಘಾಟನೆಗೆ ಆಹ್ವಾನ ನೀಡಿದ್ದಾರೆ ಎಂದು ಲೋಕ ಸಭಾ ಸೆಕ್ರೇಟರಿಯೇಟ್ ತಿಳಿಸಿದೆ.

ರಾಹುಲ್ ಗಾಂಧಿ ಟ್ವಿಟರ್‌ನಲ್ಲಿ, “ನೂತನ ಸಂಸತ್ ಭವನವನ್ನು ರಾಷ್ಟ್ರಪತಿ ಅವರು ಉದ್ಘಾಟಿಸ ಬೇಕು. ಪ್ರಧಾನ ಮಂತ್ರಿ ಅಲ್ಲ' ಎಂದು ಹೇಳಿದ್ದಾರೆ.

ವಿ.ಡಿ. ಸಾವರ್ಕರ್ ಅವರ ಜನ್ಮ ದಿನಾಚರಣೆಯಂದೇ ಸಂಸತ್‌ ಭವನ ಉದ್ಘಾಟನೆಗೊಳ್ಳಲಿದೆ. ಈ ಕುರಿತಂತೆ ಹಲವು ಪ್ರತಿಪಕ್ಷಗಳು ಸರಕಾರವನ್ನು ಗುರಿಯಾಗಿರಿಸಿ ದಾಳಿ ನಡೆಸುತ್ತಿವೆ.

ಇದು ರಾಷ್ಟ್ರ ನಿರ್ಮಾತೃರಿಗೆ ಮಾಡುವ ಅವಮಾನ ಎಂದು ಕಾಂಗ್ರೆಸ್ ಹೇಳಿದೆ. ನೂತನ ಸಂಸತ್ ಭವನದಲ್ಲಿ 1,280 ಜನರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.

ಲೋಕಸಭೆಯಲ್ಲಿ 800 ಜನರು ಹಾಗೂ ರಾಜ್ಯ ಸಭೆಯಲ್ಲಿ 300 ಜನ ಕುಳಿತುಕೊಂಡು ಕಲಾಪ ನಡೆಸಬಹುದಾಗಿದೆ.

2020 ಡಿಸೆಂಬರ್ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ನೂತನ ಸಂಸತ್ ಭವನಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.


Share: