ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ನಾಳೆ ನೂತನ ಸಂಸತ್ ಕಟ್ಟಡ ಉದ್ಘಾಟನೆ ಕೇಂದ್ರದಿಂದ 75 ರೂ. ನಾಣ್ಯ ಬಿಡುಗಡೆ

ನಾಳೆ ನೂತನ ಸಂಸತ್ ಕಟ್ಟಡ ಉದ್ಘಾಟನೆ ಕೇಂದ್ರದಿಂದ 75 ರೂ. ನಾಣ್ಯ ಬಿಡುಗಡೆ

Sat, 27 May 2023 13:01:01  Office Staff   Vb

ಹೊಸದಿಲ್ಲಿ: ನೂತನ ಸಂಸತ್‌ ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವಾಲಯವು 75 ರೂ. ನಾಣ್ಯವನ್ನು ಬಿಡುಗಡೆ ಮಾಡಲಿದೆ ಎಂದು ಸಚಿವಾಲಯ ಹೊರಡಿಸಿದ ಅಧಿಸೂಚನೆಯೊಂದು ತಿಳಿಸಿದೆ.

ನೂತನ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಮೇ 28ರಂದು ಉದ್ಘಾಟಿಸಲಿದ್ದಾರೆ.

ನಾಣ್ಯವು ವೃತ್ತಾಕಾರದಲ್ಲಿದ್ದು, 44 ಮಿಲಿಮೀಟರ್ ವ್ಯಾಸವನ್ನು ಹೊಂದಿದೆ. ನಾಲ್ಕು ಲೋಹಗಳನ್ನೊಳಗೊಂಡ ಮಿಶ್ರ ಲೋಹದಿಂದ ನಾಣ್ಯ ತಯಾರಿಸಲಾಗಿದೆ. ಲೋಹಗಳ ಸಂಯೋಜನೆ ಹೀಗಿದೆ: 50 ಶೇ. ಬೆಳ್ಳಿ, 40 ಶೇ. ತಾಮ್ರ, 5 ಶೇ. ನಿಕೆಲ್ ಮತ್ತು 5 ಶೇ. ಝಿಂಕ್.

ನಾಣ್ಯದ ಮುಖದ ಮಧ್ಯ ಭಾಗದಲ್ಲಿ ಅಶೋಕ ಸ್ತಂಭವಿದೆ. ಅದರ ಕೆಳಗೆ 'ಸತ್ಯಮೇವ ಜಯತೇ' ಎಂದು ಬರೆಯಲಾಗಿದೆ. ನಾಣ್ಯದ ಇನ್ನೊಂದು ಬದಿಯಲ್ಲಿ ಸಂಸತ್‌ ಆವರಣದ ಚಿತ್ರವಿದೆ. ಮೇಲ್ಬಾಗದಲ್ಲಿ 'ಸಂಸದ್‌ ಸಂಕುಲ್' ಎಂದು ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಕೆಳಭಾಗದಲ್ಲಿ 'ಪಾರ್ಲಿಮೆಂಟ್ ಕಾಂಪ್ಲೆಕ್ಸ್' ಎಂದು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ'' ಎಂದು ಅಧಿಸೂಚನೆ ತಿಳಿಸಿದೆ.


Share: