ಶಿರಸಿ: ಪ್ರಸಕ್ತ ವರ್ಷ ಪ್ರಕಟಗೊಂಡಿರುವ ಎಸ್ಎಸ್ಎಲ್ಸಿ (ಸ್ಟೇಟ್ ಮತ್ತು ಸಿಬಿಎಸ್ಇ) ನಲ್ಲಿ ಫಲಿತಾಂಶ ಶೇ. ೯೫ ಹಾಗೂ ಪಿಯುಸಿ ನಲ್ಲಿ ಶೇ. ೯೦ ಕ್ಕೂ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವ ನಾಮಧಾರಿ ಸಮಾಜದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ಬೆಂಗಳೂರು ನಾಮಧಾರಿ ಕ್ಷೇಮಾಭಿವೃದ್ಧಿ ಸಂಘ(ರಿ.) ಪ್ರತಿಭಾ ಪುರಸ್ಕಾರಕ್ಕೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಸಂಘದ ಪ್ರಟಣೆಯಲ್ಲಿ ತಿಳಿಸಲಾಗಿದೆ.
ಅತೀ ಹೆಚ್ಚು ಅಂಕಗಳನ್ನು ಪಡೆದ ಆಯ್ದ ಮತ್ತು ನಿರ್ದಿಷ್ಟ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದ್ದು, ಆಸಕ್ತ ವಿದ್ಯಾರ್ಥಿಗಳು ಅರ್ಜಿಯ ಜೊತೆಯಲ್ಲಿ ದೃಢೀಕರಿಸಿದ ಅಂಕಪಟ್ಟಿ, ಜಾತಿ ಮತ್ತು ವರಮಾನ ಪತ್ರದೊಂದಿಗೆ ವಿದ್ಯಾರ್ಥಿಯ ಪೂರ್ಣ ವಿಳಾಸ ಮತ್ತು ಮೋಬೈಲ್ ನಂಬರ್ ಮಾಹಿತಿಯನ್ನು ಜುಲೈ ೨೫, ೨೦೨೩ ರ ಒಳಗೆ- ಆರ್ ಎಲ್ ನಾಯಕ, # ೨೩, ೩ನೇ ಬ್ಲಾಕ್, ಬಿಡಿಎ ಕಾಂಪ್ಲೆಕ್ಸ ಹಿಂದುಗಡೆ, ನಾಮಧಾರಿ ಭವನ ಹತ್ತಿರ, ನಾಗರಭಾವಿ, ೨ ನೇ ಹಂತ, ಬೆಂಗಳೂರು-೫೬೦೦೭೨ ವಿಳಾಸಕ್ಕೆ ತಲುಪಿಸಲು ಸಂಘದ ಅಧ್ಯಕ್ಷ ಜಿ.ಬಿ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಡಾ|| ಮೋಹನ್ ದಾಸ್ ಕೆ.ಎನ್, (ಮೋ: ೯೯೦೦೧೫೮೩೬೭) ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಲಾಗಿದೆ.