ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ಕರಾವಳಿ ಸುದ್ದಿ / ಭಟ್ಕಳ:ಅಂಗನವಾಡಿ ಸಹಾಯಕಿಯರ ನೇಮಕಾತಿ ಮುಂದಕ್ಕೆ

ಭಟ್ಕಳ:ಅಂಗನವಾಡಿ ಸಹಾಯಕಿಯರ ನೇಮಕಾತಿ ಮುಂದಕ್ಕೆ

Wed, 06 Jan 2010 02:55:00  Office Staff   S.O. News Service
ಭಟ್ಕಳ, ಜನವರಿ 5: ಕಳೆದ 31-12-2009 ರಂದು ನಡೆಯಬೇಕಾಗಿದ್ದ ಅಂಗನವಾಡಿ ಸಹಾಯಕಿಯರ ನೇಮಕ ಘೋಷಣೆಯನ್ನು ಅನಿರ್ದಿಷ್ಟಾವಧಿಯವರೆಗೆ ಮುಂದಕ್ಕೆ ಹಾಕಲಾಗಿದೆ ಎಂದು ಮಹಿಳಾ ಮತ್ತು ಶಿಶು ಕಲ್ಯಾಣ ಇಲಾಖೆಯ ಅಧಿಕಾರಿ ನಾಗೇಶ ಸಭೆಗೆ ಮಾಹಿತಿ ನೀಡಿದರು.
 
ಅಭ್ಯರ್ಥಿಯ ‘ರಹವಾಸಿ’ ಮಾನದಂಡವು ಅಂಗನವಾಡಿ, ಮಜಿರೆ, ಗ್ರಾಮಪಂಚಾಯತ ವ್ಯಾಪ್ತಿಯನ್ನು ಸೂಚಿಸುತ್ತದೆಯೇ ಎಂಬುದನ್ನು ದೃಢೀಕರಿಸಿಕೊಳ್ಳಲು ಹಿರಿಯ ಅಧಿಕಾರಿಗಳ ನಿರ್ದೇಶನದತ್ತ ಮುಖ ಮಾಡಲಾಗಿತ್ತು. ಸರಕಾರದ ನೀತಿ ನಿಯಮಗಳು ಪ್ರಾಮುಖ್ಯತೆಯನ್ನು ಪಡೆಯುವುದರಿಂದ ಗೊಂದಲಕ್ಕೆ ಅವಕಾಶ ಮಾಡಿಕೊಡದೇ ಆಯ್ಕೆ ಪ್ರಕ್ರಿಯೆಯನ್ನು ನಡೆಸಬೇಕಾಗಿದ್ದು, ಸದ್ಯದಲ್ಲಿಯೇ ದಿನಾಂಕವನ್ನು ನಿಗದಿಪಡಿಸುವುದಾಗಿ ಅವರು ವಿವರಣೆ ನೀಡಿದರು.

ವರದಿ: ವಸಂತ ದೇವಾಡಿಗ, ಭಟ್ಕಳ

Share: